ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅಪಘಾತಕ್ಕೀಡಾದವರ ಮೇಲೆಯೇ ಗಂಭೀರ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | ACCIDENT | 08 ಮೇ 2022

ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಸ್ಕೂಟಿಯಲ್ಲಿ ತೆರಳುತ್ತಿದ್ದ ಇಬ್ಬರು ರಸ್ತೆಯಲ್ಲಿ ವಾಹನ ಸಹಿತ ಜಾರಿ ಬಿದ್ದಿದ್ದಾರೆ. ರಕ್ಷಣೆಗೆ ಧಾವಿಸಬೇಕಿದ್ದ ಸ್ಥಳೀಯರು ಯುವಕರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ರೈಲ್ವೆ ನಿಲ್ದಾಣ ಸಮೀಪ ಅಮೀರ್ ಅಹಮದ್ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ರಂಗನಾಥ ಮತ್ತು ವಿಶಾಲ್ ಎಂಬುವವರು ಸ್ಕೂಟಿಯಲ್ಲಿ ತೆರಳುತ್ತಿದ್ದರು. ಅಮೀರ್ ಅಹಮದ್ ಕಾಲೋನಿ ಬಳಿ ರಸ್ತೆಯಲ್ಲಿ ಮರಳು ಇದ್ದಿದ್ದರಿಂದ ಸ್ಕೀಡ್ ಆಗಿ ಬಿದ್ದಿದ್ದಾರೆ.

ಅವಾಚ್ಯವಾಗಿ ನಿಂದನೆ, ಹಲ್ಲೆ

ರಂಗನಾಥ್ ಮತ್ತು ವಿಶಾಲ್ ಬಿದ್ದಿದ್ದು ಸ್ಥಳೀಯರು ಅವರನ್ನು ರಕ್ಷಿಸಬೇಕಿತ್ತು. ಆದರೆ ಸ್ಥಳೀಯ ಯುವಕರು ಅಪಘಾತಕ್ಕೀಡಾದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ರಂಗನಾಥ್ ಮತ್ತು ವಿಶಾಲ್ ಅವರು ಅವಾಚ್ಯವಾಗಿ ನಿಂದಿಸದಂತೆ ತಿಳಿಸಿದ್ದಾರೆ. ಆಗ ಯುವಕರು ಹಲ್ಲೆ ನಡೆಸಲು ಆರಂಭಿಸಿದ್ದಾರೆ.

ವಿಶಾಲ್ ಮತ್ತು ರಂಗಾನಾಥ ಅವರನ್ನು ಕೆಳಗೆ ಬೀಳಿಸಿಕೊಂಡು ಹೊಡೆದಿದ್ದಾರೆ. ಕಲ್ಲುಗಳಿಂದ ಕೈ, ಕಾಲು, ಮೈಗೆ ಹೊಡೆದಿದ್ದಾರೆ. ಗಾಯಾಳುಗಳು ಕೂಡಲೆ ಫೋನ್ ಮೂಲಕ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿದ್ದಾರೆ.

Shimoga Nanjappa Hospital

ಘಟನೆ ಸಂಬಂಧ ಫಯಾಜ್, ಇರ್ಫಾನ್, ತಬ್ರೇಜ್, ಫಹಾದ್ ಮತ್ತು ರಿಜ್ವಾನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment