ಶಿವಮೊಗ್ಗದಲ್ಲಿ ಪಾರ್ಟಿ ವೇಳೆ ಭದ್ರಾವತಿಯ ನಾಲ್ವರಿಗೆ ಬಿಯರ್ ಬಾಟಲಿಗಳಿಂದ ಹೊಡೆದು ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 13 JANUARY 2023

SHIMOGA : ಹುಟ್ಟುಹಬ್ಬದ ಪಾರ್ಟಿ (birthday party) ವೇಳೆ ಯುವಕರ ಗುಂಪಿನ ಮೇಲೆ ಬಿಯರ್ ಬಾಟಲಿಯಿಂದ ದಾಳಿ ನಡೆಸಲಾಗಿದೆ. ಗಾಯಗೊಂಡಿರುವ ನಾಲ್ವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

Shimoga Live news Update 3 million reach

ಭದ್ರಾವತಿಯ ಸಾಗರ, ನಾಗ ಪವನ್, ತೇಜಸ್, ಚೇತನ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಏನಿದು ಘಟನೆ?

ತೇಜಸ್ ಎಂಬುವವರ ಸ್ನೇಹಿತರೊಬ್ಬರ ಪತ್ನಿಯ ಹುಟ್ಟುಹಬ್ಬದ ಪಾರ್ಟಿಯನ್ನು (birthday party) ಶಿವಮೊಗ್ಗದ ಸೋಷಿಯಲ್ ಹಾರ್ಬರ್ ನಲ್ಲಿ ಆಯೋಜಿಸಲಾಗಿತ್ತು. ರಾತ್ರಿ 11.30ರ ಹೊತ್ತಿಗೆ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಗುಂಪೊಂದು ಏಕಾಏಕಿ ಚೇತನ್ ಎಂಬಾತನ ಮೇಲೆ ಹಲ್ಲೆ ನಡೆಸಲು ಆರಂಭಿಸಿದೆ. ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ಬ್ಲಾಸ್ಟ್ ಕೇಸ್, ಹೊನ್ನಾಳಿ, ಮಂಗಳೂರಿನ ಇಬ್ಬರು ಅರೆಸ್ಟ್

ಸಾಗರ, ನಾಗ ಪವನ್, ತೇಜಸ್ ಅವರು ಜಗಳ ಬಿಡಿಸಲು ಹೋದಾಗ ಅವರ ಮೇಲೂ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಗಾಯಗೊಂಡಿದ್ದ ನಾಲ್ವರು ಅಲ್ಲಿಂದ ತಪ್ಪಿಸಿಕೊಂಡು, ತಮ್ಮ ಕಾರಿನಲ್ಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಪಾರ್ಟಿಯಲ್ಲಿದ್ದ ಆರೇಳು ಮಂದಿ ತಮ್ಮ ಮೇಲೆ ಹಲ್ಲೆ ನೆಡಸಿದ್ದಾರೆ ಎಂದು ಆರೋಪಿಸಿ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

sigandur temple jathre

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 13, 2023

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಶಿವಮೊಗ್ಗದಲ್ಲಿ ಸಾಕು ನಾಯಿ ವಿಚಾರಕ್ಕೆ ಶುರುವಾದ ಕಿರಿಕ್, ಹಲ್ಲು ಮುರಿಯುವ ಹಂತಕ್ಕೆ ಹೋಯ್ತು

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಸಿಲಿಂಡರ್ ಬುಕ್ಕಿಂಗ್, ಶಿವಮೊಗ್ಗದಲ್ಲಿ ಸಹಾಯವಾಣಿ ಆರಂಭ, ಇಲ್ಲಿವೆ ಎರಡು ನಂಬರ್‌

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆಯಿಂದ ವಾಹನಗಳ ಹರಾಜು, ಯಾವಾಗ?

Leave a Comment