SHIVAMOGGA LIVE NEWS | ATTACK | 31 ಮೇ 2022
ಬೈಕ್’ನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚರಣ್ ಶೆಟ್ಟಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು.
ಬೈಕ್ ತಡೆದ ನಾಲ್ವರು
ಚರಣ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಶೋಕ್ ಎಂಬುವವರು ಮೇ 28ರ ರಾತ್ರಿ ಮೆಗ್ಗಾನ್ ಆಸ್ಪತ್ರೆಯಿಂದ ಬೊಮ್ಮನಕಟ್ಟೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಶರಾವತಿ ನಗರದ ಸ್ಮಶಾನದ ಬಳಿ ಬೈಕ್ ತಡೆದ ನಾಲ್ವರು, ನಮ್ಮ ಬಾರ್ ಮುಂದೆ ಬಂದು ಗಲಾಟೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಮಧು ಎಂಬಾತ ಕೈಯಲ್ಲಿದ್ದ ಮಚ್ಚನ್ನು ಚರಣ್ ಶೆಟ್ಟಿಯತ್ತ ಬೀಸಿದ್ದಾನೆ. ತಪ್ಪಿಸಿಕೊಳ್ಳುವ ಭರದಲ್ಲಿ ಕೈ ಅಡ್ಡ ಹಿಡಿದಿದ್ದಾರೆ. ಈ ವೇಳೆ ಎಡಗೈ ಬೆರಳುಗಳ ಮೇಲೆ ಮಚ್ಚಿನಿಂದ ಹೊಡೆತ ಬಿದ್ದಿದೆ. ಐದು ಬೆರಳಿಗೂ ಗಂಭೀರ ಗಾಯವಾಗಿದೆ. ಕೂಡಲೆ ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ವಿನೋಬನಗರ ಠಾಣೆಗೆ ಹೋಗಿ ರಕ್ಷಣೆ ಪಡೆದಿದ್ದಾರೆ.
ಗಾಯಾಳು ಚರಣ್ ಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಧು ಮತ್ತು ಇತರೆ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಇನ್ಸ್ ಪೆಕ್ಟರ್, ಪಿಎಸ್ಐ, ಪಿಡಿಒ, ವೈದ್ಯರು ಸೇರಿ ಹತ್ತು ಮಂದಿ ವಿರುದ್ಧ ಎಫ್ಐಆರ್, ಕಾರಣವೇನು?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.