ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 DECEMBER 2024
ಶಿವಮೊಗ್ಗ : ರಾಷ್ಟ್ರಭಕ್ತರ ಬಳಗದ ವತಿಯಿಂದ ಶಿವಮೊಗ್ಗ ನಗರದಲ್ಲಿ ಒಂದು ಲಕ್ಷ ಮನೆಗಳಿಗೆ ಅಯೋದ್ಯೆ, ಕಾಶಿಯ ಪ್ರಸಾದ (Prasada) ಮತ್ತು ಬೆಳ್ಳಿ ಕೋಟೆಡ್ ನಾಣ್ಯ ಹಂಚಲು ಯೋಜಿಸಲಾಗಿದೆ. ಸೋಮವಾರದಿಂದ ಪ್ರಸಾದ ಹಂಚುವ ಕಾರ್ಯ ಆರಂಭವಾಗಲಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಅವರು ಸುದ್ದಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒಂದು ಲಕ್ಷ ಮನೆಗಳಿಗೆ ಪ್ರಸಾದ
ಈಚೆಗೆ ಶಿವಮೊಗ್ಗ ನಗರದ 1600 ಮಂದಿ ಜೊತೆಗೆ ಕೆ.ಎಸ್.ಈಶ್ವರಪ್ಪ ಕುಟುಂಬ ಸಹಿತ ಕಾಶಿ ಮತ್ತು ಅಯೋದ್ಯೆ ಪ್ರವಾಸ ಕೈಗೊಂಡಿದ್ದರು. ದೇವರ ದರ್ಶನ ಪಡೆದು ಶಿವಮೊಗ್ಗಕ್ಕೆ ಮರಳಿರುವ ಅವರು, ನಗರದ ಒಂದು ಲಕ್ಷ ಮನೆಗಳಿಗೆ ಪ್ರಸಾದ ಹಂಚಲು ನಿರ್ಧರಿಸಿದ್ದಾರೆ.
ಪ್ರವಾಸಕ್ಕೆ ಬಂದಿದ್ದ 1600 ಮಂದಿಗೆ ಡಿ.2ರಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತದೆ. ಡಿ.3ರಂದು ಶಿವಮೊಗ್ಗ ನಗರದಲ್ಲಿ ವಾರ್ಡ್‌ವಾರು ಪ್ರಸಾದ ವಿತರಿಸಲಾಗುತ್ತದೆ.
ಕೆ.ಇ.ಕಾಂತೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಇನ್ನು, ಒಂದೂವರೆ ವರ್ಷದ ಬಳಿಕ ಎರಡನೇ ಬಾರಿ ಯಾತ್ರೆ ಕೈಗೊಳ್ಳಲಾಗುತ್ತದೆ. ಆಗಲು ಸಾರ್ವಜನಿಕರು ತಮ್ಮೊಂದಿಗೆ ಯಾತ್ರೆ ಬರಬಹುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮಾಜಿ ಕಾರ್ಪೊರೇಟರ್ ಈ.ವಿಶ್ವಾಸ್, ಪಿ.ಹೆಚ್.ಕುಬೇರಪ್ಪ, ಚಿದಾನಂದ, ವಾಗೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ » ಶಿವಮೊಗ್ಗದಿಂದ ಚನ್ನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422