ಬಂಗಾರಪ್ಪ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಗ್ರಂಥಾಲಯ, 5 ಲಕ್ಷದ ಚೆಕ್‌ ನೀಡಿದ ಸಚಿವ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಸಾಹಿತ್ಯ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹೆಸರಿನಲ್ಲಿ ಗ್ರಂಥಾಲಯ (Library) ಸ್ಥಾಪನೆಗೆ ಸಚಿವ ಮಧು ಬಂಗಾರಪ್ಪ ವೈಯಕ್ತಿಕವಾಗಿ 5 ಲಕ್ಷ ರೂ. ಅನುದಾನ ನೀಡಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಮಂಜುನಾಥ್‌ ಅವರಿಗೆ ಸಚಿವ ಮಧು ಬಂಗಾರಪ್ಪ ಚೆಕ್‌ ಹಸ್ತಾಂತರಿಸಿದರು.

ಮಿನಿಸ್ಟರ್‌ ಹೇಳಿದ ಎರಡು ಪ್ರಮುಖಾಂಶ

 

#f1f1f1 - POINT 1ಸಾಹಿತ್ಯ ಗ್ರಾಮಕ್ಕೆ ಅಗತ್ಯವಿರುವ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯವನ್ನು ಸರ್ಕಾರದಿಂದ ಒದಗಿಸುವ ಪ್ರಯತ್ನ ಮಾಡುತ್ತೇನೆ. ಇಲ್ಲಿನ ಗ್ರಂಥಾಲಯ ಮಾದರಿ ಆಗಬೇಕು. ಸಾಹಿತಿಗಳು, ಓದುಗರಿಗೆ ಸಾಹಿತ್ಯ ಗ್ರಾಮ ನೆಚ್ಚಿನ ತಾಣವಾಗಬೇಕು.

Madhu-Bangarappa-donates-5-lakh-for-libraray

#f1f1f1 - POINT 2ಬಂಗಾರಪ್ಪ ಅವರು ಕುವೆಂಪು ಅವರ ಸಾಹಿತ್ಯದ ಪ್ರೇಮಿಯಾಗಿದ್ದರು. ಅನೇಕ ಇಂಗ್ಲೀಷ್‌ ಕೃತಿಗಳನ್ನು ಕೂಡ ಓದಿಕೊಂಡಿದ್ದರು. ಅವರ ಕಾಲದಲ್ಲಿಯೇ ಕುವೆಂಪು ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಲಾಯಿತು. ಅಲ್ಲದೆ ಕುವೆಂಪು ಪ್ರತಿಷ್ಠಾನವನ್ನು ಆರಂಭಿಸಿದ್ದರು. ರಾಜಕಾರಣಿಯಾಗಿ ಸಾಹಿತ್ಯ ಪ್ರೇಮಿಯಾಗಿದ್ದ ನಮ್ಮ ತಂದೆ ಹೆಸರಿನ ಗ್ರಂಥಾಲಯಕ್ಕೆ ಪುಸ್ತಕ ನೀಡುತ್ತಿರುವುದು ಸಂತೋಷವೆನಿಸುತ್ತದೆ.

ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್‌ ಬಾನು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್‌, ಪ್ರಮುಖರಾದ ವಿಜಯ ಕುಮಾರ್‌, ರಮೇಶ್‌ ಹೆಗ್ಡೆ, ನೃಪತುಂಗ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗಕ್ಕೆ ಲಗ್ಗೆ ಇಟ್ಟ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ, ಆಟೋ ಚಾಲಕರ ಆಕ್ರೋಶ, ಏನಿದು ರ‍್ಯಾಪಿಡೋ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment