SHIMOGA NEWS, 20 OCTOBER 2024 : ನಗರದಲ್ಲಿ ವಶಕ್ಕೆ ಪಡೆಯಲಾದ ಏಳು ಮಂದಿಯು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದರು ಎಂಬುದು ದೃಢವಾಗಿದೆ. ಇವರು ಬಾಂಗ್ಲಾದೇಶದ (Bangla) ಪ್ರಜೆಗಳು ಎಂಬುದು ವಿಚಾರಣೆ ವೇಳೆ ಖಚಿತಗೊಂಡಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ಅಕ್ರಮ ವಲಿಸಿಗರ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ.
ಜಯನಗರ ಪೊಲೀಸರ ಕಾರ್ಯಾಚರಣೆ
ಸವಳಂಗ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಏಳು ಮಂದಿ, ಬಾಂಗ್ಲಾದೇಶದ ಪ್ರಜೆಗಳು ಎಂಬ ಶಂಕೆ ವ್ಯಕ್ತವಾಗಿತ್ತು. ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಅವರು ಅಕ್ರಮ ನಿವಾಸಿಗಳು ಎಂದು ಖಚಿತವಾಗಿತ್ತು.
ನಕಲಿ ಗುರುತು ಚೀಟಿ ಹೊಂದಿದ್ದರು
ಅಕ್ರಮ ನಿವಾಸಿಗಳು ಕಳೆದ ಒಂದೆರಡು ತಿಂಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದರು. ವಿವಿಧೆಡೆ ಕೂಲಿ ಕೆಲಸದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ. ಕೂಲಿ ಕಾರ್ಮಿಕರಾದ ಮೊಮಿನ್, ಅಶ್ರಫುಲ್ಲಾ, ಜೊವಾರುಲ್ಲಾ, ನಸೀಮ್, ರೆಹಮಾನ್, ಅಮಿನುಲ್, ಮತಿನ್, ಜೋಲಿನ್ ಎಂಬುವವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ನಕಲಿ ಗುರುತು ಚೀಟಿ ಹೊಂದಿರುವುದು ಪತ್ತೆಯಾಗಿತ್ತು.
ಬೆಂಗಳೂರಿನ ವಲಸಿಗರ ಕ್ಯಾಂಪ್ಗೆ ರವಾನೆ
ಆರು ಮಂದಿ ಅಕ್ರಮ ವಲಸಿಗರನ್ನು ಬೆಂಗಳೂರಿನ ನೆಲಮಂಗಲದ ಸೊಂಡೆಕೊಪ್ಪದಲ್ಲಿರುವ ಅಕ್ರಮ ವಲಸಿಗರ ಬಂಧನ ಕೇಂದ್ರಕ್ಕೆ ರವಾನಿಸಲಾಗಿದೆ. ಇಲ್ಲಿ ವಿಚಾರಣೆ ವೇಳೆ ರಸ್ತೆ ಮೂಲಕ ಭಾರತಕ್ಕೆ ಬಂದಿದ್ದು, ನಕಲಿ ಗುರುತು ಚೀಟಿಯನ್ನು ಹೊಂದಿರುವುದನ್ನು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ » ‘ಲಿಂಗನಮಕ್ಕಿ ಡ್ಯಾಮ್ಗೆ ಮುತ್ತಿಗೆ ಹಾಕ್ತೀವಿ, ವಿದ್ಯುತ್ ಉತ್ಪಾದನೆ ತಡೆಯುತ್ತೇವೆʼ
ಬಾಂಗ್ಲಾದೇಶದ ನಿವಾಸಿಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ ವಿವಿಧೆಡೆ ತಲೆಮರೆಸಿಕೊಳ್ಳುತ್ತಿದ್ದಾರೆ. ಕೃಷಿ ಕಾರ್ಮಿಕರಾಗಿ, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ನುಸುಳುಕೋರರಿಗೆ ಭಾರತದ ಪ್ರಜೆಗಳು ಎಂದು ನಕಲು ಗುರುತು ಚೀಟಿ ನೀಡಲಾಗುತ್ತಿದೆ. ಇದನ್ನು ನಿರ್ವಹಿಸುವ ದಂಧೆಕೋರರು ಬಾಂಗ್ಲಾದೇಶಕ್ಕೆ ಹೊಂದಿಕೊಂಡ ಭಾರತದಲ್ಲಿ ಗಡಿಭಾಗದಲ್ಲಿದ್ದಾರೆ. ಈ ನುಸುಳುಕೋರರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200