ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 20 OCTOBER 2024 : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಮಸ್ಯೆ ಪರಿಹರಿಸದೆ ಇದ್ದರೆ ಜೋಗದಲ್ಲಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ (Dam) ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಅಧ್ಯಕ್ಷ ಕೆ.ಎಂ.ಹೂವಪ್ಪ ಎಚ್ಚರಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದಲ್ಲಿ ಅ.21ರಂದು ಸಾಗರದಲ್ಲಿ ಬೃಹತ್ ಮೆರವಣಿಗೆ, ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಇದಕ್ಕೆ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಬೆಂಬಲವಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಬೇಡಿಕೆ ಈಡೇರದೆ ಇದ್ದರೆ ಲಿಂಗನಮಕ್ಕಿ ಜಲಾಶಯಕ್ಕೆ ಮುತ್ತಿಗೆ ಹಾಕುತ್ತೇವೆ. ಆ ಬಳಿಕ ಜೋಗದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ವಿದ್ಯುತ್ ಸ್ಥಗಿತಗೊಳಿಸುತ್ತೇವೆ.
ಕೆ.ಎಂ.ಹೂವಪ್ಪ , ಜಿಲ್ಲಾ ಶರಾವತಿ ಹಿನ್ನೀರು ಮುಳುಗಡೆ ರೈತರ ಸಂಘದ ಅಧ್ಯಕ್ಷ
ರೈತರಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗದೆ ಇದ್ದರೆ ಲಿಂಗನಮಕ್ಕಿ ಜಲಾಶಯವನ್ನು ಸರ್ಕಾರವೆ ಒಡೆದು ಹಾಕಲಿ. ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ನಿಮ್ಮ ಸರ್ಕರವೆ ನಮಗೆ ಬೇಡ. ಮಲೆನಾಡು ಭಾಗವನ್ನು ಪ್ರತ್ಯೇಕ ರಾಜ್ಯ ಮಾಡಲಿ.
ತೀ.ನಾ.ಶ್ರೀನಿವಾಸ್, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ
ಸುದ್ದಿಗೋಷ್ಠಿಯಲ್ಲಿ ಎಂ.ಡಿ.ನಾಗರಾಜ್, ಪ್ರಮೋದ್, ರಾಘವೇಂದ್ರ ಇದ್ದರು.
ಇದನ್ನೂ ಓದಿ » ಲಕ್ಕಿನಕೊಪ್ಪದಲ್ಲಿ ಕೋಡಿ ಬಿದ್ದ ಕೆರೆ, ಕೊಚ್ಚಿ ಹೋದ ರಸ್ತೆ ಪಕ್ಕದ ಮಣ್ಣು, ಜಮೀನಿಗೆ ನೀರು