SHIVAMOGGA LIVE NEWS | BIKE | 1 ಜೂನ್ 2022
ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ಕಳ್ಳತನವಾಗಿದೆ. ಹೂವಿನ ಮಾರುಕಟ್ಟೆ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ.
ಗೋಪಾಳದ ಶಿವಕುಮಾರ್ ಎಂಬುವವರಿಗೆ ಸೇರಿದ ಟಿವಿಎಸ್ ಅಪಾಚೆ ಬೈಕ್ ಕಳುವಾಗಿದೆ. ಹೂವಿನ ಮಾರುಟ್ಟೆಯಲ್ಲಿ ಶಿವಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ.
ಹೂವಿನ ಮಾರುಕಟ್ಟೆ ಪಕ್ಕದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಶಿವಕುಮಾರ್ ಅವರು ಬಳಿಕ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿ, ಗಾಯಗೊಂಡಿದ್ದ ಸವಾರ ಸಾವು
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.