ಶಿವಮೊಗ್ಗದಲ್ಲಿ ಟೀ ಕುಡಿದು ಹಿಂತಿರುಗುಷ್ಟರಲ್ಲಿ ನಾಪತ್ತೆಯಾಗಿತ್ತು ಬೈಕ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 FEBRUARY 2024

SHIMOGA : ಟೀ ಕುಡಿದು ಮರಳುವಷ್ಟರಲ್ಲಿ ಬೈಕ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಕೆಇಬಿ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದರೆ. ಸಂತೋಷ್‌ ಎಂಬುವವರಿಗೆ ಸೇರಿದ ಸ್ಪ್ಲೆಂಡರ್‌ ಬೈಕ್‌ ಕಳುವಾಗಿದೆ.

ವಿದ್ಯಾನಗರದ ಸಂತೋಷ್‌ ಅವರು ಬೈಕ್‌ ರಿಪೇರಿ ಹಿನ್ನೆಲೆ ತಮ್ಮ ಸಂಬಂಧಿ ನಿಶಾಂತ್‌ ಎಂಬುವವರಿಗೆ ಕೊಟ್ಟಿದ್ದರು. ರಿಪೇರಿ ಮುಗಿಸಿ ಮನೆಗೆ ಮರಳುವಾಗ ನಿಶಾಂತ್‌, ಕೆಇಬಿ ಸರ್ಕಲ್‌ನಲ್ಲಿ ಬೈಕ್‌ ನಿಲ್ಲಿಸಿ ಟೀ ಕುಡಿಯಲು ತೆರಳಿದ್ದರು. ಟೀ ಕುಡಿದು ಬರುವಷ್ಟರಲ್ಲಿ ಬೈಕ್‌ ಇರಲಿಲ್ಲ. ಘಟನೆ ಸಂಬಂಧ ಸಂತೋಷ್‌ ಅವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆಗೆ ಯತ್ನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment