ಶಿವಮೊಗ್ಗ LIVE
ಶಿವಮೊಗ್ಗ: ರಸ್ತೆ ಗುಂಡಿಗಳನ್ನು (Pot Holes) ಮುಚ್ಚುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಇವತ್ತು ರಸ್ತೆ ತಡೆ ನಡೆಸಲಾಯಿತು. ಶಿವಮೊಗ್ಗ ಬಸ್ ನಿಲ್ದಾಣದ ಮುಂಭಾಗದ ಅಶೋಕ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಅವುಗಳನ್ನ ಮುಚ್ಚುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.

ಎಂಎಲ್‌ಎ ಹೇಳಿದ್ದೇನು?
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಇದರ ಹೊರತು ಹಿಂದೂ ವಿರೋಧಿ ನೀತಿಗಳನ್ನು ಮಾತ್ರ ಮಾಡುತ್ತಿದೆ. ಡಿಜೆ ಬಳಕೆ ಮಾಡಿದ್ದಕ್ಕೆ 57 ಗಣಪತಿ ಸಮಿತಿಗಳ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ತಲ್ವಾರ್‌ಗಳನ್ನು ಹಿಡಿದು ಓಡಾಡಿದವರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ » ತೀರ್ಥಹಳ್ಳಿಯಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ, ಎಲ್ಲೆಲ್ಲಿ ಸಂಚರಿಸಿದವು?
ಬಹು ಹೊತ್ತು ರಸ್ತೆ ತಡೆ, ಆಕ್ರೋಶ
ಅಶೋಕ ವೃತ್ತದಲ್ಲಿ ಸುಮಾರು ಒಂದು ಗಂಟೆ ರಸ್ತೆ ತಡೆ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳು ಬಹು ದೂರದವರೆಗೆ ನಿಂತಿದ್ದವು. ಸಂಚಾರ ಠಾಣೆ ಪೊಲೀಸರು ಪರ್ಯಾಯ ಮಾರ್ಗದಲ್ಲಿ ವಾಹನಗಳನ್ನು ಕಳುಹಿಸಿದ್ದರಿಂದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗಿತ್ತು.
ಇನ್ನು, ಕೆಲವು ವಾಹನ ಸವಾರರು ಬಿಜೆಪಿ ಕಾರ್ಯಕರ್ತರ ಜೊತೆಗೆ ತಗಾಗೆ ತೆಗೆದಿದ್ದರು. ಶಾಸಕ ಚನ್ನಬಸಪ್ಪ ಭಾಷಣದ ಮಧ್ಯೆ, ಕೆಲವು ವಾಹನ ಸವಾರರು ಬಿಡುವಂತೆ ಕಾರ್ಯಕರ್ತರಿಗೆ ತಿಳಿಸುತ್ತಿದ್ದರು. ಅಶೋಕ ವೃತ್ತದಲ್ಲಿ ದೀರ್ಘಾವಧಿ ರಸ್ತೆ ತಡೆಗೆ ಅವಕಾಶ ನೀಡಿದ ಪೊಲೀಸರ ವಿರುದ್ಧವು ಜನರು ಆಕ್ರೋಶ ವ್ಯಕ್ತಪಡಿಸಿದರು.






BJP Holds protest against Pot Holes
LATEST NEWS
- BREAKING NEWS – ತೀರ್ಥಹಳ್ಳಿಯಲ್ಲಿ ಭೀಕರ ಅಪಘಾತ

- ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

- ಒಂದು ಲಕ್ಷದ ಸನಿಹಕ್ಕೆ ಅಡಿಕೆ ರೇಟ್ | 13 ಜನವರಿ 2026 | ಇವತ್ತಿನ ಅಡಿಕೆ ಧಾರಣೆ

- ಶಬರಿಮಲೈ ಸಮೀಪ ಶಿವಮೊಗ್ಗ, ಭದ್ರಾವತಿ ಮಾಲಾಧಾರಿಗಳಿಂದ ದಿಢೀರ್ ಪ್ರತಿಭಟನೆ, ಕಾರಣವೇನು?
- ಶಿವಮೊಗ್ಗ ಜಿಲ್ಲಾಧಿಕಾರಿಗೆ ಸೈಬರ್ ವಂಚಕರ ಕಾಟ, ಆಗಿದ್ದೇನು? ಪ್ರಕಟಣೆಯಲ್ಲಿ ಡಿಸಿ ಹೇಳಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು




