SHIMOGA, 20 AUGUST 2024 : ಸಿದ್ದರಾಮಯ್ಯ ಅವರು ಈ ರಾಜ್ಯದ ಕಳಂಕಿತ ಮುಖ್ಯಮಂತ್ರಿ (Chief Minister). ಅವರು ಕಳಂಕಿತರಲ್ಲ ಎಂಬ ಆದೇಶ ಬಂದರೆ ಪಾದಪೂಜೆ ಮಾಡುತ್ತೇವೆ ಎಂದು ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಾಸಕರು ಏನೆಲ್ಲ ಹೇಳಿದರು.
ಇಲ್ಲಿದೆ ಐದು ಪ್ರಮುಖಾಂಶ
ಕಾಂಗ್ರೆಸ್ ನಾಯಕತ್ವ ರಾಜ್ಯಪಾಲರನ್ನು ಗುರಿಯಾಗಿಸಿಕೊಂಡಿದೆ. ರಾಜ್ಯಪಾಲರಿಗೆ ಅಪಮಾನ ಮಾಡುತ್ತಿದೆ. ರಾಜ್ಯಪಾಲರ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರ ಹೇಳಿಕೆಯಿಂದ ಅವರ ಮೇಲಿದ್ದ ಗೌರವ ತಗ್ಗಿದೆ. ಕಾಂಗ್ರೆಸ್ ನಾಯಕ ಐವಾನ್ ಡಿಸೋಜ ಬಾಂಗ್ಲಾದೇಶದಲ್ಲಿ ಆದ ಸ್ಥಿತಿ ಇಲ್ಲಿ ಆಗುತ್ತದೆ ಎಂಬ ಹೇಳಿಕೆ ನೀಡಿದ್ದು ಖಂಡನಾರ್ಹ. ಕೂಡಲೆ ಅವರನ್ನು ಬಂಧಿಸಬೇಕು. ಹೋರಾಟಕ್ಕೆ ಅಭ್ಯಂತರವಿಲ್ಲ. ಆದರೆ ರಾಜ್ಯಪಾಲರ ಹುದ್ದೆಗೆ ಅಗೌರವ ತರುವುದು ಸರಿಯಲ್ಲ.
![]() |
ಇದನ್ನೂ ಓದಿ ⇒ ಮಘ ಮಳೆಗೆ ಕೋಡಿ ಬಿತ್ತು ಅಬ್ಬಲಗೆರೆ ಕೆರೆ, ಬೊಮ್ಮನಕಟ್ಟೆಯಲ್ಲಿ ಹಾನಿ, ಆನಂದಪುರದಲ್ಲಿ ಕೊಚ್ಚಿ ಹೋದ ಸಸಿ
ತಪ್ಪು ಮಾಡಿಲ್ಲ ಅಂದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರಿಗೆ ಭಯವೇಕೆ. ತನಿಖೆ ಎದುರಿಸಲು ಸಿದ್ದರಾಗಿ. ವಿಧಾನಸಭೆಯಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಲಾಯನ ಮಾಡಿದ್ದರು. ಹಾಗಾಗಿ ಅವರು ಕಳಂಕಿತ ಸಿಎಂ ಎಂಬ ಭಾವನೆ ನಮಗೆ ಮೂಡುತ್ತಿದೆ. ಆದ್ದರಿಂದ ಅವರು ತಕ್ಷಣ ರಾಜೀನಾಮೆ ನೀಡಬೇಕು. ರಾಜ್ಯಪಾಲರ ನಿರ್ಧಾರ ಸರಿ ಇದೆ. ನಿಮಗೆ ಪ್ರತಿಜ್ಞಾ ವಿಧಿ ಬೋಧಿಸಲು ರಾಜ್ಯಪಾಲರಿಗೆ ಅವಕಾಶವಿದೆ. ಹಾಗೆಯೇ ಕಿತ್ತೊಯಲು ಕೂಡ ಅಧಿಕಾರವಿದೆ. ನೀವು ಕಳಂಕಿತರಲ್ಲ ಎಂದು ಸಾಬೀತಾದರೆ ಪಾದ ಪೂಜೆ ಮಾಡುತ್ತೇವೆ.
ಇದನ್ನೂ ಓದಿ ⇒ ರೀಲ್ಸ್ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್ ಉದಾಹರಣೆಗಳು
ಸಿದ್ದರಾಮಯ್ಯ ತಮ್ಮನ್ನು ಹಿಂದುಳಿದ ವರ್ಗದ ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಹಿಂದುಳಿದ ವರ್ಗದವರಿಗೆ ವಂಚಿಸುತ್ತಿದ್ದಾರೆ. ಬಿಜೆಪಿ ಸರ್ಕಾರ 1193 ಸಮುದಾಯ ಭವನ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಸರ್ಕಾರ ಇದನ್ನು ರದ್ದುಗೊಳಿಸಿದೆ. ಅಲ್ಲದೆ ವಿವಿಧ ಸಮುದಾಯಗಳಿಗೆ ನೀಡಿದ್ದ ಸುಮಾರು 300 ಕೋಟಿ ರೂ. ಹಣ ಹಿಂಪಡೆಯಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೇ 99 ಸಮುದಾಯ ಭವನಗಳಿಗೆ ನೀಡಿದ್ದ ಹಣ ಹಿಂಪಡೆಯಲಾಗಿದೆ. ಈ ಪೈಕಿ ಶಿವಮೊಗ್ಗ ನಗರದ 31 ಸಮುದಾಯ ಭವನಗಳು ರದ್ದಾಗಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡುತ್ತಿಲ್ಲ. ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಮಿತಿ ವಿಧಿಸಲಾಗುತ್ತಿದೆ. ಇದು ಅನಾಗರಿಕ ವರ್ತನೆ.
ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ?
ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣವನ್ನು ದುರುಪಯೋಗವಾಗಿದೆ. ಸರ್ಕಾರದ ಹಣ ಮತ್ತೊಂದು ರಾಜ್ಯದ ಚುನಾವಣೆಗೆ ಬಳಕೆಯಾಗಿದೆ. ಸಿದ್ದರಾಮಯ್ಯ ಅವರ ಮೂಗಿನಡಿಯೇ ಇವೆಲ್ಲ ಆಗಿದೆ. ಈಗ ನ್ಯಾಯಾಲಯ ಆದೇಶ ಪ್ರಕಟಿಸುವ ಮುನ್ನ ಸಿದ್ದರಾಮಯ್ಯ ಅವರು ತೀರ್ಮಾನಕ್ಕೆ ಬರುವುದು ಒಳ್ಳೆಯದು. ಅವರ ಮಾನಸಿಕತೆ ಅರ್ಥ ಮಾಡಿಕೊಂಡೆ ನ್ಯಾಯಾಧೀಶರು ಹತ್ತು ದಿನದ ಕಾಲವಕಾಶ ನೀಡಿರಬಹುದು ಎಂಬುದು ನನ್ನ ಭಾವನೆ. ಆದ್ದರಿಂದ ಸಿದ್ದರಾಮಯ್ಯ ಕೂಡಲೆ ರಾಜನಾಮೆ ನೀಡಲಿ.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ನಾವು ನೆಹರು ಕ್ರೀಡಾಂಗಣದಲ್ಲಿ ಮಾಡುತ್ತಿದ್ದೆವು. ಆಗ ಸುಮಾರು 25 ಸಾವಿರ ಮಕ್ಕಳು, ಪೋಷಕರು ಭಾಗವಹಿಸುತ್ತಿದ್ದರು. ನೆಹರು ಸ್ಟೇಡಿಯಂ ಅಭಿವೃದ್ಧಿ ಸೇರಿ ಅನೇಕ ಕಾರಣಗಳಿಂದ ರಾಷ್ಟ್ರೀಯ ಹಬ್ಬಗಳು ಇಲ್ಲಿಂದ ಸ್ಥಳಾಂತರವಾಯಿತು. ಆಗ ಕೆಲವೇ ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಮೊನ್ನೆ ಸ್ವಾತಂತ್ರ್ಯೋತ್ಸವ ಸಂದರ್ಭ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದಾಗ ಪೂರಕವಾಗಿ ಸ್ಪಂದಿಸಿದರು. ಫ್ರೀಡಂ ಪಾರ್ಕ್‌ನಲ್ಲಾದರು ರಾಷ್ಟ್ರೀಯ ಹಬ್ಬಗಳನ್ನ ಮಾಡಿದರೆ ಹೆಚ್ಚು ಜನರು ಭಾಗವಹಿಸಬಹುದು ಎಂಬುದು ನಮ್ಮ ಅಭಿಪ್ರಾಯ. ಇನ್ನಷ್ಟೆ ನಿರ್ಧಾರವಾಗಬೇಕಿದೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ, ನೇಣು ಬಿಗಿದು ಆತ್ಮಹತ್ಯೆಯ ಸವಾಲೊಡ್ಡಿದ ಮುಖಂಡ
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗದೀಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನವುಲೆ, ಎನ್.ಜೆ.ನಾಗರಾಜ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200