ಶಿವಮೊಗ್ಗದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಪಾದಯಾತ್ರೆ, ಯಾರೆಲ್ಲ ಇದ್ದರು? ಏನೆಲ್ಲ ಮಾತನಾಡಿದರು?

ಶಿವಮೊಗ್ಗ: ಬಿಜೆಪಿ ಶಿವಮೊಗ್ಗ ವಿಭಾಗದಿಂದ ಗುರುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ’ ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಪಾಲ್ಗೊಂಡಿದ್ದರು. (ಈ ಸುದ್ದಿಯನ್ನು ಇನ್ನು 96 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ರಾಮಣಶ್ರೇಷ್ಠಿ ಪಾರ್ಕ್‌ನಿಂದ ಆರಂಭಗೊಂಡ ಪಾದಯಾತ್ರೆಯು ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ದುರ್ಗಿಗುಡಿ ಮಾರ್ಗವಾಗಿ ಅಲ್ಲಮಪ್ರಭು ಮೈದಾನ ತಲುಪಿತು. ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರದ ಕಾರ್ಯಕರ್ತರು ಕೇಸರಿ ಟೋಪಿ, ಶಾಲುಗಳನ್ನು ಧರಿಸಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

BJP-Holds-Padayathre-in-Shimoga-City

ಯಾರೆಲ್ಲ ಏನೆಲ್ಲ ಮಾತನಾಡಿದರು?

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡಲು ವಿಫಲವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹಾಕಲು ಡೀಸೆಲ್ ಇಲ್ಲ, ರಿಪೇರಿ ಮಾಡಲು ದುಡ್ಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಗೃಹ ಲಕ್ಷ್ಮಿ ಯೋಜನೆಯ ₹5 ಸಾವಿರ ಕೋಟಿ ನಾಪತ್ತೆಯಾಗಿರುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಇದುವರೆಗೆ ಆ ಹಣ ಪತ್ತೆಯಾಗಿಲ್ಲ. ರಾಜ್ಯದಲ್ಲಿ ವಿದ್ಯುತ್, ಹಾಲು, ಸಾರಿಗೆ, ಮದ್ಯ, ಮೆಟ್ರೋ ಸೇರಿದಂತೆ ವಿವಿಧ ದರಗಳನ್ನು ಏರಿಸಿದ್ದು, ಸಾಮಾನ್ಯ ಜನ ಬದುಕಲಾರದ ಸ್ಥಿತಿ ನಿರ್ಮಾಣವಾಗಿದೆ. ಹಾಲು ಉತ್ಪಾದಕರಿಗೆ ಸಹಾಯ ಧನ ನೀಡುವುದಾದರೆ ಸರ್ಕಾರದ ಬೊಕ್ಕಸದಿಂದ ನೀಡಬೇಕೇ ವಿನಾ ಗ್ರಾಹಕರ ಮೇಲೆ ಹೊರೆ ಹೊರಿಸಬಾರದು.

ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ: ವೋಟ್ ಚೋರಿ ಆಗಿಲ್ಲ. ವೋಟ್ ಚೋರಿ ಹೆಸರಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ಜನ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ.

ಬಿ.ವೈ. ರಾಘವೇಂದ್ರ, ಸಂಸದ: ರಾಜ್ಯ ಸರ್ಕಾರ ಹಾಲಿನ ದರ ₹8 ಹೆಚ್ಚಿಸುವುದಾಗಿ ಹೇಳಿ ₹12 ಏರಿಕೆ ಮಾಡಿದೆ. ಬಸ್ ಪ್ರಯಾಣ ದರವನ್ನು 30ರಿಂದ 40ರಷ್ಟು ಹೆಚ್ಚಿಸುವ ನೀಚ ಕೆಲಸ ಮಾಡಿದೆ. ಹೆಣ್ಮಕ್ಕಳಿಗೆ ಉಚಿತಗಳನ್ನು ನೀಡಿ, ಗಂಡು ಮಕ್ಕಳಿಂದ ಮೂರು ಪಟ್ಟು ಹಣ ಕಿತ್ತುಕೊಳ್ಳಲಾಗುತ್ತಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ: ಮೋದಿ ಯಾರಪ್ಪನ ಕೃಪೆಯಿಂದ ಪ್ರಧಾನಿಯಾಗಿಲ್ಲ. ಜನರ ಮನಸ್ಸು ಮತ್ತು ಪ್ರೀತಿಯನ್ನು ಗೆದ್ದು ಪಿಎಂ ಆಗಿದ್ದಾರೆ. ಎಸ್‌ಐಆರ್‌ನಲ್ಲಿ ಅಕ್ರಮ ಆಗಿರುವುದಾಗಿ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಮಾಡಿದ್ದು, ರಾಜ್ಯ ಸರ್ಕಾರದ ನೌಕರರೇ ಆಗಿದ್ದಾರೆ. ತಾಕತ್ತು ಇದ್ದರೆ, ಅವರ ಮೇಲೆಯೇ ಪ್ರಕರಣ ದಾಖಲಿಸಲಿ. 99 ಲಕ್ಷ ಬೇಡ, ಬರೀ 9 ಲಕ್ಷ ಡಿಲೀಟ್ ಆದ ಮತದಾರರನ್ನು ಕರೆತಂದರೂ ಸಾಕು 2028ರ ಚುನಾವಣೆಯಲ್ಲಿ ನಿಮ್ಮನ್ನೇ ಬಹುಮತದಿಂದ ಆಯ್ಕೆ ಮಾಡ್ತೇವೆ.

ಶಾಸಕರಾದ ಹರತಾಳು ಹಾಲಪ್ಪ, ಎಸ್. ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಆ‌ರ್.ಕೆ. ಸಿದ್ದರಾಮಣ್ಣ, ಅಶೋಕ್ ನಾಯ್ಕ, ಬೆಳ್ಳಿ ಪ್ರಕಾಶ್, ಕುಮಾರಸ್ವಾಮಿ, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಹರಿಕೃಷ್ಣ, ಹೆಚ್.ಎನ್. ಮಂಜುನಾಥ್, ಯಶೋಧ ವೈಷ್ಣವ್, ಜ್ಞಾನೇಶ್ವರ್ ಇತರರಿದ್ದರು.