ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತದ ಮುಂಜಾಗ್ರತೆಯಿಂದಾಗಿ ಶಿವಮೊಗ್ಗದಲ್ಲಿ ರೂಪಾಂತರಿ ಕರೋನ ವೈರಸ್ ಹರಡುವುದು ತಪ್ಪಿದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ, ದೊಡ್ಡ ಮಟ್ಟದಲ್ಲಿ ವೈರಸ್ ಹಬ್ಬುವ ಆತಂಕವಿತ್ತು.
ವಿದೇಶದಿಂದ ಬಂದಾಗಲೇ ಅಲರ್ಟ್
- ಲಂಡನ್‍ನಿಂದ ಶಿವಮೊಗ್ಗಕ್ಕೆ 23 ಮಂದಿ ಆಗಮಿಸಿದ್ದರು. ಬೆಂಗಳೂರಿನಿಂದ ಅವರ ಮಾಹಿತಿ ತಲುಪುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆದರು.
- ಮೊದಲ ದಿನವೇ 23 ಮಂದಿಯನ್ನು ಪತ್ತೆ ಹಚ್ಚಿ, ಅವರ ತಪಾಸಣೆ ನಡೆಸಿ, ನಿಗಾ ವಹಿಸಲಾಯಿತು.
- ಕರೋನ ಪಾಸಿಟಿವ್ ಕಾಣಿಸಿಕೊಂಡವರನ್ನು ಕೂಡಲೇ ಐಸೊಲೇಟ್ ಮಾಡಲಾಯಿತು.
- ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಕೂಡಲೇ ಪತ್ತೆ ಹಚ್ಚಲಾಯಿತು.
- ಮನೆಯನ್ನು ಸ್ಯಾನಿಟೈಸ್ ಮಾಡಿ, ಸ್ಟಿಕ್ಕರ್ ಅಂಟಿಸಲಾಯಿತು. ಮನೆಗೆ ಯಾರೂ ಪ್ರವೇಶಿಸದಂತೆ ಎಚ್ಚರ ವಹಿಸಲಾಯಿತು.
ಮೊದಲ ದಿನವೇ ಪತ್ತೆ ಹಚ್ಚಿದರು
ವಿದೇಶದಿಂದ ಶಿವಮೊಗ್ಗಕ್ಕೆ ಬಂದವರನ್ನು ಮೊದಲ ದಿನವೇ ಪತ್ತೆ ಹಚ್ಚಲಾಗಿದೆ. ಅವರಿಗೆ ಹೆಚ್ಚು ಕಾಂಟ್ಯಾಕ್ಟ್ ಬೆಳೆಯಲಿಲ್ಲ. ಏಳು ಜನರ ಜೊತೆಗೆ ಪ್ರಾಥಮಿಕ ಸಂಪರ್ಕ ಇತ್ತು. ಅದರಲ್ಲಿ ಮೂವರಿಗೆ ಸೋಂಕು ತಗುಲಿದೆ. ಅದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ | BREAKING NEWS | ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422