ನಡು ರಸ್ತೆಯಲ್ಲಿ ಮತ್ತೆ ಮುರಿದ ಸ್ಲ್ಯಾಬ್‌, ವಾಹನ ಸವಾರರೆ ಹುಷಾರ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA NEWS, 23 SEPTEMBER 2024 : ಸ್ಮಾರ್ಟ್‌ ಸಿಟಿ ಯೋಜನೆ ಅವಾಂತರ ಒಂದೆರಡಲ್ಲ. ಈ ಯೋಜನೆ ಅಡಿ ರಸ್ತೆ ಮಧ್ಯೆ ಅಳವಡಿಸಲಾಗಿರುವ ಕೇಬಲ್‌ ಡೆಕ್‌ಗಳ ಸ್ಲ್ಯಾಬ್‌ಗಳು (Slab) ಪುನಃ ವಾಹನ ಸವಾರರಲ್ಲಿ ಆತಂಕ ಮೂಡಿಸುತ್ತಿವೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗದ ಬಾಲರಾಜ ಅರಸ್‌ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಕೇಬಲ್‌ ಡೆಕ್‌ ಅಳವಡಿಸಲಾಗಿದೆ. ಇದಕ್ಕೆ ನಡುರಸ್ತೆಯಲ್ಲಿ ಸ್ಲ್ಯಾಬ್‌ಗಳನ್ನು ಹಾಕಲಾಗಿದೆ. ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಈ ಸ್ಲ್ಯಾಬ್‌ಗಳು ಮುರಿದು ಹೋಗುತ್ತಿವೆ.

ಮತ್ತೆ ಮುರಿದಿವೆ ಸ್ಲ್ಯಾಬ್‌ಗಳು

ಕೆಇಬಿ ಸರ್ಕಲ್‌ ಕಡೆಯಿಂದ ಮಹಾವೀರ ಸರ್ಕಲ್‌ ಕಡೆಗೆ ತೆರಳುವ ಕಡೆ ಎರಡು ಬದಿಯ ಸ್ಲ್ಯಾಬ್‌ಗಳು ಮುರಿದು ಬೀಳುವ ಹಂತದಲ್ಲಿವೆ. ಸ್ವಲ್ಪ ಯಾಮಾರಿದರೆ ಇಲ್ಲಿ ಅಪಘಾತ ನಿಶ್ಚಿತ.

Slabs-at-Balaraja-urs-road-in-Shimoga

ಈ ಮಾರ್ಗದಲ್ಲಿ ರೈಸ್‌ ಬೌಲ್‌ ಹೊಟೇಲ್‌ ಎದುರು ಸ್ಲ್ಯಾಬ್‌ ತುಂಡಾಗಿದೆ. ಇದನ್ನು ರಿಪೇರಿ ಮಾಡುವ ಬದಲು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಇನ್ನು ಟ್ಯಾಂಕ್‌ ಮೊಹಲ್ಲಾ ರಸ್ತೆಯ ತಿರುವಿನಲ್ಲಿರುವ ಸ್ಲ್ಯಾಬ್‌ ಕೂಡ ಹಾನಿಯಾಗಿದೆ. ಹೆಚ್ಚು ವಾಹನ ಮತ್ತು ಜನ ಓಡಾಡುವ ರಸ್ತೆಯಲ್ಲಿ ಈ ಸ್ಲ್ಯಾಬ್‌ಗಳಿಂದ ತೀವ್ರ ಸಮಸ್ಯೆ ಉಂಟಾಗಿದೆ.

Slabs-at-Balaraja-urs-road-in-Shimoga

ಈ ಹಿಂದೆ ಬಾಲರಾಜ ಅರಸ್‌ ರಸ್ತೆಯಲ್ಲಿ ಸ್ಲ್ಯಾಬ್‌ಗಳು ಹಾನಿಯಾಗಿ ರಸ್ತೆಯ ಎರಡು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿದ ಬೆನ್ನಿಗೆ ರಿಪೇರಿ ಕಾರ್ಯ ನಡೆಸಲಾಗಿತ್ತು. ಆದರೆ ಈಗ ಪುನಃ ಸಮಸ್ಯೆ ತಲೆ ಎತ್ತಿದೆ.

ಇದನ್ನೂ ಓದಿ » ಹಿಂದೂ ಮಹಾಸಭಾ ಮೆರವಣಿಗೆ, ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್‌ ಮಾಂಗಲ್ಯ ಸರ ನಾಪತ್ತೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment