ಯುವನಿಧಿ ವೇದಿಕೆಯಲ್ಲಿ ಸಿಎಂಗೆ 3 ಬೇಡಿಕೆ ಸಲ್ಲಿಸಿದ ಸಂಸದ ರಾಘವೇಂದ್ರ, ಏನೇನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 JANUARY 2024

SHIMOGA : ನಿರುದ್ಯೋಗಿ ಯುವಕರಿಗೆ ಆರ್ಥಿಕ ಚೈತನ್ಯ ನೀಡುತ್ತಿರುವ ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಒಳ್ಳೆಯ ಪ್ರಯತ್ನ. ಕೇಂದ್ರ ಸರ್ಕಾರವು ಈಚೆಗೆ ಪಿಎಂ ವಿಶ್ವಕರ್ಮ ಯೋಜನೆ ಮೂಲಕ ವಿವಿಧ ಕಸುಬಿನವರಿಗೆ ಸಾಲ ಯೋಜನೆ ಮೂಲಕ ನೆರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಡಿದ ಅವರು, ಮೀನು ಹಿಡಿಯಲು ಬಲೆ ಕೊಟ್ಟರೆ ಸಾಲದು. ಮೀನು ಹಿಡಿಯುವುದನ್ನು ಕಲಿಸಿಕೊಡಬೇಕು. ಯುವನಿಧಿ ಯೋಜನೆ ಈ ದಿಕ್ಕಿನಲ್ಲಿ ಸಾಗಿದರೆ ಅನುಕೂಲ ಎಂದರು.

ಸಂಸದರಿಂದ 3 ಪ್ರಮುಖ ಬೇಡಿಕೆ

ಬೇಡಿಕೆ 1 : ಸಾಗರ ತಾಲೂಕು ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.

ಬೇಡಿಕೆ 2 : ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಮತ್ತು ಮಂಜು ಕವಿದ ವಾತಾವರಣದಿಂದ ಲ್ಯಾಂಡಿಂಗ್‌ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ, ಯೋಜನೆಯಿಂದ ಏನೇನೆಲ್ಲ ಲಾಭವಿದೆ? ಇಲ್ಲಿದೆ ಸಿಎಂ ಹೇಳಿದ 4 ಪಾಯಿಂಟ್‌

ಬೇಡಿಕೆ 3 : ವಿಮಾನ ನಿಲ್ದಾಣದ ಪಕ್ಕದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ 40 ಎಕರೆ ಜಾಗ ಮೀಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಅನುದಾನ ನೀಡಬೇಕು.

ಇದನ್ನೂ ಓದಿ – ‘ಗ್ಯಾರಂಟಿ ಯೋಜನೆ ಉದ್ದೇಶ ಹಣ ಕೊಟ್ಟು ಜೇಬು ತುಂಬಿಸುವುದಲ್ಲ’, ಇಲ್ಲಿದೆ ಡಿಕೆಶಿ ಭಾಷಣದ 3 ಪಾಯಿಂಟ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment