ಕ್ಯಾನ್ಸರ್‌ ಗೆಲ್ಲಲು ಇದೊಂದು ಯೋಚನೆ ಸಾಕು, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಡಾಕ್ಟರ್‌ ಸಲಹೆ

ಶಿವಮೊಗ್ಗ: ನಮ್ಮ ಸುತ್ತಲೂ ಸ್ಫೂರ್ತಿ ನೀಡುವಂತಹ ಜನ ಇರುತ್ತಾರೆ. ಅವರನ್ನು ನೋಡಿ ಸ್ಪೂರ್ತಿ ಪಡೆಯಬೇಕು. ಆಗ ಮಾತ್ರ ತುಂಬಾ ಕಠಿಣ ಪರಿಸ್ಥಿತಿಗಳಿಂದ ಹೊರ ಬರಬಹುದು ಎಂದು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟಂಟ್ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಹೇಳಿದರು. (Cancer)➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಬ್ರೆಸ್ಟ್ ಕ್ಯಾನ್ಸರ್ ಸರ್ವೈವರ್ಸ್ ಮೀಟ್’ನಲ್ಲಿ ಮಾತನಾಡಿದದರು. ಮನುಷ್ಯ ಸಕಾರಾತ್ಮಕವಾಗಿ ಆಲೋಚಿಸಬೇಕು. ಇಲ್ಲಿ ಕ್ಯಾನ್ಸರ್ ಗೆದ್ದವರು ಸೇರಿದ್ದಾರೆ. ಅವರೆಲ್ಲಾ ನಮಗೆ ಸ್ಫೂರ್ತಿ ಎಂದರು.

ಜೀವನದಲ್ಲಿ ನಗು ಇರಬೇಕು. ಸಣ್ಣ ನಗು ಕ್ಯಾನ್ಸರ್ ಗೆದ್ದಿದ್ದೇನೆ ಎಂಬ ಖುಷಿಯನ್ನು ದುಪ್ಪಟ್ಟು ಮಾಡುತ್ತದೆ.

  • ಕೆ.ಶೈಲಶ್ರೀ, ಜೆಎನ್‌ಎನ್‌ಸಿಇ ಸಹ ಪ್ರಾಧ್ಯಾಪಕಿ

RED-LINE-

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಅವರು ಹೆಣ್ಣು ಮಕ್ಕಳಿಗೆ ಇರುವ ಹಕ್ಕುಗಳು ಹಾಗೂ ಸರ್ಕಾರದಿಂದ ಇರುವ ಯೋಜನೆಗಳು, ಅವುಗಳ ಸದುಪಯೋಗ ಪಡೆದು ಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ‘ಆರ್ಯಾ ಫೌಂಡೇಷನ್ ಫಾರ್ ಕ್ಯಾನ್ಸರ್ ರೆಸಿಲಿಯನ್ಸ್’ ಪ್ರಾರಂಭಿಸಲಾಯಿತು.

Breast-Cancer-programme-at-Sahyadri-Narayana-Hospital-Shimoga.

ಯೋಗ ತರಬೇತಿ ಅಧಿವೇಶನ ಆಯೋಜಿಸಿ, ದೈಹಿಕ ಹಾಗೂ ಮಾನಸಿಕ ಸಮತೋಲನದ ಮಹತ್ವ ಎತ್ತಿ ಹಿಡಿಯಲಾಯಿತು. ವಿಗ್ಸ್ ಡಿಸೈನ್ಸ್ ವತಿಯಿಂದ ನಡೆದ ವಿಶೇಷ ಅಧಿವೇಶನದಲ್ಲಿ, ವಿಗ್ಸ್ (ಕೃತಕ ಕೂದಲು) ಮತ್ತು ಬ್ರೆಸ್ಟ್ ಪ್ರೋಸ್ಥೆಸಿಸ್‌ಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್ ಪಿ ಜಾನ್,  ರೇಡಿಯೇಷನ್‌ ಆಂಕಾಲಾಜಿಸ್ಟ್‌ ಡಾ. ರವಿ ನಡಹಳ್ಳಿ, ಡಾ. ಸುದರ್ಶನ್‌ ಗುಪ್ತಾ, ಸರ್ಜಿಕಲ್‌ ಆಂಕಾಲಾಜಿಸ್ಟ್‌ ಡಾ.ಎಂ.ಎ.ವಿವೇಕ ಇದ್ದರು.

ಇದನ್ನೂ ಓದಿ » ಶಿವಮೊಗ್ಗ ಲೈವ್.ಕಾಂ ವರದಿ ಪರಿಣಾಮ, ಕೋಟಿ ವೆಚ್ಚದಲ್ಲಿ ರಿಪೇರಿಯಾಗ್ತಿದೆ ರೋಡ್‌, ಸ್ಥಳಕ್ಕೆ ಎಂಎಲ್‌ಎ ಭೇಟಿ

Cancer

Leave a Comment