ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ನಗರದ ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆ ರಿಪೇರಿ ಕಾರ್ಯ ಆರಂಭವಾಗಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ ಕಾಮಗಾರಿ ಸ್ಥಳಕ್ಕೆ ಭೇಟಿ (Visit) ನೀಡಿ ಪರಿಶೀಲಿಸಿದರು. ರಸ್ತೆ ಹಾಳಾಗಿ ವಾಹನ ಸವಾರರು ಮತ್ತು ಸ್ಥಳೀಯರು ಅನುಭವಿಸುತ್ತಿರುವ ಯಾತನೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು.
ಎಂಎಲ್‌ಎ ಭೇಟಿ, ಪರಿಶೀಲನೆ
ಕಾಮಗಾರಿ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿದ್ದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಂಚಾರ ಠಾಣೆ ಪೊಲೀಸರು, ಸ್ಥಳೀಯ ಮುಖಂಡರ ಜೊತೆಗೆ ಕಾಮಗಾರಿ ಗುಣಮಟ್ಟ ಮತ್ತು ಪ್ರಗತಿಯ ಕುರಿತು ಪರಿಶೀಲಿಸಿದರು.
ಒಟ್ಟು ₹3 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಪೈಕಿ ₹2 ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ, ₹1 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಪೂರ್ಣವಾದ ನಂತರ ನಗರದಲ್ಲಿ ಸಂಚಾರ ದಟ್ಟಣೆ ತಗ್ಗಲಿದೆ.
- ಎಸ್.ಎನ್.ಚನ್ನಸಬಪ್ಪ, ಶಾಸಕ
![]()
ಶಿವಮೊಗ್ಗ ಲೈವ್ ವರದಿ ಇಂಪ್ಯಾಕ್ಟ್
ಇನ್ನು, ಹೊನ್ನಾಳಿ ರಸ್ತೆಯ ರೈಲ್ವೆ ಮೇಲ್ಸೇತುವೆ ಸಂಪರ್ಕ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ ಎಂದು ಶಿವಮೊಗ್ಗ ಲೈವ್.ಕಾಂ ಈ ಹಿಂದೆ ವರದಿ ಮಾಡಿತ್ತು. ಶಿವಮೊಗ್ಗ ಸಿಟಿಯ ಈ ರಸ್ತೆಯಲ್ಲಿ ಸಂಚರಿಸುವುದಷ್ಟೆ ಅಲ್ಲ ಅಕ್ಕಪಕ್ಕ ನಿಲ್ಲುವುದೂ ಡೇಂಜರ್, ಏನಿದು? ಶೀರ್ಷಿಕೆ ಅಡಿ 2025ರ ಆ.21ರಂದು ಸುದ್ದಿ ಪ್ರಕಟವಾಗಿತ್ತು.

ಜ್ಯೋತಿ ನಗರಕ್ಕೆ ಎಂಎಲ್‌ಎ ಭೇಟಿ
ಶಿವಮೊಗ್ಗ: ಎಂಆರ್‌ಎಸ್ ಸರ್ಕಲ್ ಸಮೀಪದ ಜ್ಯೋತಿ ನಗರದಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಭೇಟಿ ನೀಡಿದ್ದರು. ಈ ವೇಳೆ ಬಡಾವಣೆಯಲ್ಲಿರುವ ಪಾರ್ಕ್ ಒತ್ತುವರಿ ಮಾಡಲು ನಡೆದ ಪ್ರಯತ್ನದ ಕುರಿತು ಸ್ಥಳೀಯರು ಗಮನಕ್ಕೆ ತಂದರು. ಅಲ್ಲದೆ ಬಡಾವಣೆಯ ಸಮಸ್ಯೆಗಳ ಕುರಿತು ಸ್ಥಳೀಯರು ಮಾಹಿತಿ ನೀಡಿದರು.

ಬಡಾವಣೆಯ ಸಮಸ್ಯೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚನ್ನಬಸಪ್ಪ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಪಕ್ಷದ ಪ್ರಮುಖರು, ಬಡಾವಣೆಯ ನಿವಾಸಿಗಳು ಇದ್ದರು.

ಇದನ್ನೂ ಓದಿ » ಬಸ್ಸಿನ ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗ್ ಕಡೆ ಗಮನ ಹರಿಸಿದ ಮಹಿಳೆಗೆ ಕಾದಿತ್ತು ಆಘಾತ







