ರಾಗಿಗುಡ್ಡದಲ್ಲಿ ಕುರಿ ಮೇಯಿಸಲು ತೆರಳಿದ್ದ ವ್ಯಕ್ತಿಗೆ ಕರೆಂಟ್‌ ಶಾಕ್‌, ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 OCTOBER 2023

SHIMOGA : ಕುರಿ ಮೇಯಸಿಲು ತೆರಳಿದ್ದಾಗ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಲೈನ್‌ ಮ್ಯಾನ್‌ (Line Man), ಮೇಸ್ತ್ರಿ ಮತ್ತು ಸಹಾಯಕ ಇಂಜಿನಿಯರ್‌ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಾಗಿದೆ.

ರಾಗಿಗುಡ್ಡದ ಶಾಂತಿ ನಗರದ ಚಾನಲ್‌ ಏರಿಯಾ ರಸ್ತೆಯಲ್ಲಿ ಗಿರೀಶ (26) ಎಂಬುವವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಗಿರೀಶ ಕುರಿ ಮೇಯಿಸಲು ತೆರಳಿದ್ದರು. 11 ಸಾವಿರ ಕೆ.ವಿ. ವಿದ್ಯುತ್‌ ಶಕ್ತಿ ಕಂಬದ ತಂತಿ ಪಕ್ಕದಲ್ಲಿಯೇ ಬಿದ್ದಿದ್ದು ಶಾಕ್‌ ಹೊಡೆದು, ಗಿರೀಶ್‌ ಮೃತಪಟ್ಟಿದ್ದಾರೆ. ಲೈನ್‌ ಮ್ಯಾನ್‌, ಮೇಸ್ತ್ರಿ ಮತ್ತು ಸಹಾಯಕ ಇಂಜಿನಿಯರ್‌ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗಿರೀಶ್‌ ಪತ್ನಿ ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- ಚಕ್ರಕ್ಕೆ ಸೀರೆ ಸಿಲುಕಿದೆ ಅಂದರು, ಬೈಕ್ ಸ್ಲೋ ಮಾಡ್ತಿದ್ದಂತೆ ಮಹಿಳೆಯರಿಗೆ ಶಾಕ್‌, 2 ತಿಂಗಳ ಬಳಿಕ ಕೇಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment