ಶಿವಮೊಗ್ಗ ವಿಮಾನ ನಿಲ್ದಾಣದ ಬ್ಲೂಪ್ರಿಂಟ್ ಬದಲಾಯಿಸದಿದ್ದರೆ ಕಾನೂನು ಹೋರಾಟ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 JUNE 2021

ಸೋಗಾನೆ ವಿಮಾನ ನಿಲ್ದಾಣ ಕಟ್ಟದ ವಿನ್ಯಾಸವನ್ನು (ಬ್ಲೂಪ್ರಿಂಟ್) ಜಿಲ್ಲಾಡಳಿತ ಬದಲಾಯಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್‍.ಎಸ್.ಸುಂದರೇಶ್, ಬಿಜೆಪಿಯ ಕಮಲದ  ಚಿಹ್ನೆ ರೀತಿಯಲ್ಲಿ ಇಡೀ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ವಿಮಾನ ನಿಲ್ದಾಣದ ಕಟ್ಟಡದಲ್ಲಿಯೂ ಪಕ್ಷದ ಚಿಹ್ನೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಸಹಮತ ನೀಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿ ಇದ್ದಾಕ್ಷಣ ಕಮಲದ ಚಿಹ್ನೆ ರೀತಿಯಲ್ಲಿಯೇ  ಕಟ್ಟಡವನ್ನು ವಿನ್ಯಾಸಗೊಳಿಸಬೇಕೆಂದಿಲ್ಲ. ಪಕ್ಷದ ಫಂಡ್‍ನಿಂದ ವಿಮಾನ ನಿಲ್ದಾಣ ಮಾಡಿಲ್ಲ. ಜನರ ಹಣ ಇದಕ್ಕೆ ಹಾಕಲಾಗಿದೆ. ಆದ್ದರಿಂದ ಕಟ್ಟಡದ ವಿನ್ಯಾಸ ಬದಲಾಯಿಸಬೇಕು. ಜಿಲ್ಲೆಯ ಸಾಹಿತಿಗಳು ಅಥವಾ ಹೋರಾಟಗಾರರ ಹೆಸರು ನಿಲ್ದಾಣಕ್ಕೆ ನಾಮಕರಣ ಮಾಡಬೇಕು. 100 ಕೋಟಿಯಲ್ಲಿ ಪೂರ್ಣಗೊಳ್ಳಬೇಕಿದ್ದ ನಿಲ್ದಾಣಕ್ಕೆ  4೦೦ ಕೋಟಿ ವೆಚ್ಚ ತೋರಿಸಲಾಗಿದೆ. ಇದರಿಂದಾಗಿ ಕಿಕ್ ಪಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ ಹೆಚ್‍.ಎಸ್.ಸುಂದರೇಶ್ ಆರೋಪಿಸಿದರು.

270820 Congress President Sundaresh 1 1

ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ವಿಶ್ವನಾಥ ಕಾಶಿ, ಯಮುನಾ ರಂಗೇಗೌಡ, ಚಂದ್ರಶೇಖರ್, ನಾಗರಾಜ್, ರಘು ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

ಇನ್ಮುಂದೆ ಕರೋನ ಪರೀಕ್ಷೆ ನಿಮ್ಮ ಮನೆಯಲ್ಲೇ ಆಗುತ್ತೆ. ಶಿವಮೊಗ್ಗ ನಗರ ವ್ಯಾಪ್ತಿಯ ಯಾವುದೆ ಏರಿಯಾದಿಂದ ಕರೆ ಮಾಡಿ. ಪರೀಕ್ಷೆಗೆ ನಿಮ್ಮ ಮನೆಗೆ ಬರ್ತಾರೆ ತಜ್ಞರು.

189146674 1131587070654535 9127287656608744677 n.jpg? nc cat=107&ccb=1 3& nc sid=8bfeb9& nc ohc=Jmr3WxJAjjEAX i1r8l& nc ht=scontent.fblr1 3

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment