DASARA NEWS, 4 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಚಲನಚಿತ್ರ (Cinema) ದಸರಾಗೆ ಚಾಲನೆ ಸಿಕ್ಕಿದೆ. ನಟಿ, ಮಾಜಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಭೀಮಾ ಸಿನಿಮಾ ಖ್ಯಾತಿಯ ನಟಿ ಪ್ರಿಯಾ ಶಠಮರ್ಷಣ್ ಕಾರ್ಯಕ್ರಮದ ಹೈಲೈಟ್ ಆಗಿದ್ದರು.
ಡಾ. ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ನಾಯಕ ನಟ, ರಂಗಭೂಮಿ ಕಲಾವಿದ ಅವಿನಾಶ್ ಶಠಮರ್ಷಣ್, ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಭಾಗವಹಿಸಿದ್ದರು.
![]() |
ಯಾರೆಲ್ಲ ಏನೇನು ಹೇಳಿದರು?
» ಉಮಾಶ್ರೀ, ನಟಿ, ಮಾಜಿ ಸಚಿವೆ
ಶಿಕ್ಷಣ ಮತ್ತು ಸಾಮಾಜಿಕವಾಗಿ ಶಿವಮೊಗ್ಗದ ಜನರು ವಿಶೇಷ ಮನಸ್ಥಿತಿ ಹೊಂದಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವ ಅನುಭವ ಬೇರೆ. ಮನೆಯಲ್ಲಿ ಶಿಳ್ಳೆ, ಚಪ್ಪಾಳೆ ಬೀಳುವುದಿಲ್ಲ. ಹಾಗಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವಂತಾಗಬೇಕು. ಉತ್ತಮ ಚಿತ್ರಗಳನ್ನು ನೀಡಿದರೆ ಪ್ರೇಕ್ಷಕರು ಖಂಡಿತ ವೀಕ್ಷಿಸುತ್ತಾರೆ. ಕನ್ನಡದ ಮಕ್ಕಳಿಗೆ ರಂಗಭೂಮಿ, ಕನ್ನಡ ಸಿನಿಮಾ ವೀಕ್ಷಿಸುವಂತೆ ಮಾಡಬೇಕು. ಬರಿ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್‌ನಲ್ಲಿ ಪರ ಭಾಷೆ ಸಿನಿಮಾ ಮಾತ್ರ ವೀಕ್ಷಿಸುವಂತೆ ಆಗಬಾರದು. ಕನ್ನಡದ ಸಾಂಸ್ಕೃತಿಕ ನೆಲೆಗಟ್ಟನ್ನು ತಿಳಿಸುವಂತೆ ಆಗಬೇಕು.
» ಪ್ರಿಯಾ ಶಠಮರ್ಷಣ್, ಭೀಮಾ ಖ್ಯಾತಿಯ ನಟಿ
ಮೈಸೂರು ನನ್ನ ತವರು. ಶಿವಮೊಗ್ಗ ಗಂಡನ ಮನೆ. ಎರಡೂ ಕಡೆ ಸಡಗರದ ದಸರಾ ನಡೆಯುತ್ತದೆ. ಇದು ಅತ್ಯಂತ ಖುಷಿ. ಶಿವಮೊಗ್ಗದ ಜನರು ನಿರ್ಭಯವಾಗಿ ಮಾತನಾಡುತ್ತಾರೆ. ಪಕ್ವತೆಗು ಹೆಸರಾಗಿದೆ.
ಇದೇ ವೇಳೆ ನಟಿ ಶಠಮರ್ಷಣ್ ಅವರು ಭೀಮಾ ಸಿನಿಮಾ ಡೈಲಾಗ್ ಮತ್ತು ರಂಗಗೀತೆ ಹಾಡಿ ಸಭೀಕರನ್ನು ರಂಜಿಸಿದರು.
» ಅವಿನಾಶ್ ಶಠಮರ್ಷಣ್, ನಟ, ರಂಗಭೂಮಿ ಕಲಾವಿದ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹುಟ್ಟಿದವನು ನಾನು. ಇಲ್ಲಿಯೇ ಓಡಾಡಿಕೊಂಡು ಇದ್ದೆ. ಭಾಷೆ, ಕಲೆ, ಸಾಹಿತ್ಯದಲ್ಲಿ ಮೈಸೂರು, ಶಿವಮೊಗ್ಗದಲ್ಲಿ ಒಂದೇ ಬಗೆಯ ಒಲವಿದೆ. ಶಿವಮೊಗ್ಗ ಅಂದರೆ ನನಗೆ ಕೋಟೆ ದೇಗುಲ, ಆಂಜನೇಯ ಸದಾ ನೆನಪಾಗುತ್ತದೆ.
ಕಾರ್ಯಕ್ರಮದ ಬಳಿಕ ಚಲನಚಿತ್ರ ಮತ್ತು ಸಾಹಿತ್ಯ ಕುರಿತು ಸಿನಿಮಾ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಾದದಲ್ಲಿ ಭಾಗವಹಿಸಿದ್ದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಖಾಹಾರಿ ಸಿನಿಮಾ ನಿರ್ಮಾಪಕ ರಾಜೇಶ್ ಕೀಳಂಬಿ, ನಿರ್ದೇಶಕ ಸಂದೀಪ್ ಸುಂಕದ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ » ಶಿವಮೊಗ್ಗ ದಸರಾಗೆ ವೈಭವದ ಚಾಲನೆ, ಹೇಗಿತ್ತು ಉದ್ಘಾಟನೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200