SHIMOGA NEWS, 2 OCTOBER 2024 : ಈ ಬಾರಿ ಶಿವಮೊಗ್ಗ ದಸರಾದಲ್ಲಿ ಸಾಲು ಸಾಲು ಸಿನಿಮಾ ಸ್ಟಾರ್‌ಗಳು (Cinema Stars) ಭಾಗವಹಿಸಲಿದ್ದಾರೆ. ನವರಾತ್ರಿ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೆಳೆಯಲು ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಯಾವೆಲ್ಲ ತಾರೆಯರು ಭಾಗವಹಿಸ್ತಿದ್ದಾರೆ?
» ಅ.3ರಂದು ಬೆಳಗ್ಗೆ 11 ಗಂಟೆಗೆ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
» ಅ.4ರಂದು ಬೆಳಗ್ಗೆ 9.30ಕ್ಕೆ ನಟಿ, ಮಾಜಿ ಸಚಿವೆ ಉಮಾಶ್ರೀ ಅವರು ದಸರಾ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ನಟಿ ಪ್ರಿಯಾ ಶಠವರ್ಷಣ್, ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ, ನಿರ್ದೇಶಕ ಸಂದೀಪ್ ಸುಂಕದ್ ಭಾಗವಹಿಸಲಿದ್ದಾರೆ.
» ಅ.4ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 4.30 ಮಹಿಳಾ ದಸರಾ ಉದ್ಘಾಟನೆಗೆ ನಟಿ ಪ್ರಿಯಾ ಶಠಮರ್ಷಣ್ ಆಗಮಿಸುತ್ತಿದ್ದಾರೆ. ಈಚೆಗೆ ಭೀಮ ಸಿನಿಮಾದಲ್ಲಿ ಪ್ರಿಯಾ ಅವರು ಪೊಲೀಸ್ ಪಾತ್ರದಲ್ಲಿ ಅಭಿನಯಿಸಿ ಜನ ಮನ್ನಣೆ ಗಳಿಸಿದ್ದರು.

» ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಚಲನಚಿತ್ರ ಮತ್ತು ಸಾಹಿತ್ಯ ಕುರಿತ ಕಾರ್ಯಾಗಾರ ಮತ್ತು ಸಂವಾದ ನಡೆಸಲಿದ್ದಾರೆ. ಛಾಯಾಚಿತ್ರ – ಕ್ಯಾಮರಾ ಪ್ರದರ್ಶನವನ್ನು ಡಾ ವಿ.ನಾಗೇಂದ್ರ ಪ್ರಸಾದ್ ಉದ್ಘಾಟಿಸಲಿದ್ದಾರೆ.
» ಅ.5ರಂದು ಡಾ. ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ಮಕ್ಕಳ ದಸರಾ ಸಮಾರೋಪ ಸಮಾರಂಭ ನಡೆಯಲಿದೆ. ಝಿ ಕನ್ನಡ ವಾಹಿನಿಯ ಆರ್ಯ ಸ್ವರೂಪ್ ಭಾಗವಹಿಸಲಿದ್ದಾರೆ.
» ಅ.5ರಂದು ಡಾ. ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ. ಸತ್ಯಪ್ರಕಾಶ್ ಅವರು ಭಾಗವಹಿಸಲಿದ್ದಾರೆ. ಚಲನಚಿತ್ರ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಉಪಸ್ಥಿತರಿರಲಿದ್ದಾರೆ.
» ಅ.9ರಂದು ಸಂಜೆ 5 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಯುವ ದಸರಾ ಅಂಗವಾಗಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಡಾ ಶಮಿತಾ ಮಲ್ನಾಡ್ ತಂಡ ಭಾಗವಹಿಸಲಿದೆ.
» ಅ.10ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ಸಾಂಸ್ಕೃತಿಕ ದಸರಾ ನಡೆಯಲಿದೆ. ಅಂದು ನಟಿ ಮಾಲಾಶ್ರೀ ಉದ್ಘಾಟಿಸಲಿದ್ದಾರೆ. ಅ.11ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಟಿ ಭವ್ಯ ಉದ್ಘಾಟಿಸಲಿದ್ದಾರೆ. ಸಂಗೀತ ವೈಭವ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕಿ ಮಂಗಳಾರವಿ, ಕನ್ನಡ ಕೋಗಿಲೆ ಖ್ಯಾತಿಯ ಸುರಕ್ಷಾ ದಾಸ್, ಪಾರ್ಥ ಚಿಂತನ್, ಮಲೆನಾಡು ಕೋಗಿಲೆ ವಿಜೇತ ಪೃಥ್ವಿ ಗೌಡ ಭಾಗವಹಿಸಲಿದ್ದಾರೆ.
ಸಿನಿಮಾ ಉಚಿತ ಪ್ರದರ್ಶನ
ದಸರಾ ಚಲನಚಿತ್ರೋತ್ಸವದಲ್ಲಿ ನಾಲ್ಕು ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಅ.4ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಶಾಖಾಹಾರಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಅ.5ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರು ಪಲ್ಯ, ಅ.6ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಂಬ್ಳಿಹುಳ, ಅ.7ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ಥರ್ ಸಿನಿಮಾ ಪ್ರದರ್ಶನವಾಗಲಿದೆ. ಎಲ್ಲ ಸಿನಿಮಾಗಳು ಬೆಳಗ್ಗೆ 9 ಗಂಟೆಯಿಂದ ಪ್ರದರ್ಶನವಾಗಲಿದೆ.
ಇದನ್ನೂ ಓದಿ » ನಾಳೆಯಿಂದ ಶಿವಮೊಗ್ಗ ದಸರಾ, ಉದ್ಘಾಟನೆಗೆ ಬರ್ತಿದ್ದಾರೆ ಖ್ಯಾತ ಸಿನಿಮಾ ನಿರ್ದೇಶಕ
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





