ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020
ಟ್ರಾಫಿಕ್ ನಿಯಮ ಉಲ್ಲಂಘಿಸುತ್ತಿರುವ ಶಿವಮೊಗ್ಗದ ಸಿಟಿ ಬಸ್’ಗಳಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ನಿರಂತರವಾಗಿ ದಂಡ ಪ್ರಯೋಗ ಮಾಡುತ್ತಿದ್ದಾರೆ. ಇದೇ ರೀತಿ ವರ್ತನೆ ಮುಂದುವರೆಸಿದರೆ ಇನ್ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿವಮೊಗ್ಗ ಪೊಲೀಸರು ವಾರ್ನಿಂಗ್ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಸಾರ್ವಜನಿಕರ ದೂರು ಹೆಚ್ಚಾದ ಹಿನ್ನೆಲೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಸ್ಸುಗಳ ವಿರುದ್ಧ ಕೇಸ್ ಹಾಕಿ, ದೊಡ್ಡ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿತ್ತು.
ನವೆಂಬರ್ 21 ರಿಂದ 29ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ಅವಧಿಯಲ್ಲಿ 89 ಪ್ರಕರಣಗನ್ನು ದಾಖಲಿಸಿ 50,200 ರೂ. ದಂಡ ವಿಧಿಸಲಾಗಿತ್ತು. ಈ ಕಾರ್ಯಾಚರಣೆ ಬಳಿಕ ಶಿವಮೊಗ್ಗದ ಸಿಟಿ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವ ಪರಿಪಾಠ ಕಡಿಮೆ ಆಗಿತ್ತು. ಆದರೆ ಈಗ ಪುನಃ ಇದೇ ವರ್ತನೆ ಕಂಡು ಬಂದಿದೆ. ಹೀಗಾಗಿ ಸಂಚಾರಿ ಪೊಲೀಸರು ಪುನಃ ಫಿಲ್ಡಿಗಿಳಿದಿದ್ದಾರೆ.
ಸಿಟಿ ಬಸ್ಸುಗಳಿಗೆ ಮತ್ತೆ ಬಿತ್ತು ಫೈನ್
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರ ಸೂಚನೆ ಮೇರೆಗೆ ಸಂಚಾರಿ ಪೊಲೀಸರು ಸಿಟಿ ಬಸ್ಸುಗಳಿಗೆ ಪುನಃ ಬಿಸಿ ಮುಟ್ಟಿಸಿದ್ದಾರೆ. ಜನವರಿ 23ರಂದು 13 ಸಿಟಿ ಬಸ್ಸುಗಳ ವಿರುದ್ಧ ಕೇಸ್ ಹಾಕಲಾಗಿದೆ. ನಿಗದಿತ ನಿಲುಗಡೆ ಹೊರತು ಬೇರೆ ಕಡೆ ಸ್ಟಾಪ್ ಕೊಟ್ಟ ಆರೋಪದ ಹಿನ್ನೆಲೆ ಕೇಸ್ ಹಾಕಲಾಗಿದೆ.
ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಸಿಟಿ ಬಸ್ಸುಗಳ ವಿರುದ್ಧ ಕೇಸ್ ಹಾಕಿ, 4500 ಫೈನ್ ವಸೂಲಿ ಮಾಡಲಾಗಿದೆ. ಇನ್ನು, ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಸಿಟಿ ಬಸ್ಸುಗಳ ವಿರುದ್ಧ ಕೇಸ್ ಹಾಕಿ, 2 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ನಿಗದಿತ ಸ್ಥಳ ಹೊರತು ಬೇರೆ ಕಡೆಗೆ ಸಿಟಿ ಬಸ್ಸುಗಳನ್ನು ನಿಲ್ಲಿಸಿದರೆ ದಂಡ ಹಾಕುತ್ತಿದ್ದೇವೆ. ಇದು ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
READ ALSO
- ಅಡಿಕೆ ಧಾರಣೆ | 10 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ರಸ್ತೆ ಬದಿ ಕೈಚೀಲದಲ್ಲಿತ್ತು ನವಜಾತ ಗಂಡು ಶಿಶು, ಮುಂದೇನಾಯ್ತು?
- ಆಲ್ಕೊಳ ಸಮೀಪ ಆಳದ ಚಾನಲ್ಗೆ ಬಿದ್ದ ಕುದುರೆ, ಜೀವದ ಹಂಗು ತೊರೆದು ರಕ್ಷಣೆ, ಹೇಗಿತ್ತು ಕಾರ್ಯಾಚರಣೆ?
- ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್
- ನೆಹರು ರಸ್ತೆಯಲ್ಲಿ TVS XL ನಾಪತ್ತೆ | ಎತ್ತಿನಗಾಡಿಗೆ ಗೂಡ್ಸ್ ವಾಹನ ಡಿಕ್ಕಿ – ಫಟಾಫಟ್ ಸುದ್ದಿಗಳು
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Shivamogga Traffic Police impose fines on city bus for violating traffic rules.