ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 6 JUNE 2023
SHIMOGA : ಸಿಟಿ ಬಸ್ (city bus) ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ 18 ದಿನದ ಬಳಿಕ ಸಾವನ್ನಪ್ಪಿದ್ದಾರೆ. ಕೋಮಾ ಸ್ಥಿತಿಗೆ ತಲುಪಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಟ್ಯಾಂಕ್ ಮೊಹಲ್ಲಾ ನಿವಾಸಿ ಸಿ.ಎಸ್.ಇಕ್ಬಾಲ್ ಅಹಮದ್ (69) ಮೃತ ದುರ್ದೈವಿ. ಮೇ 16ರಂದು ಮಹಾವೀರ ವೃತ್ತದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಇಕ್ಬಾಲ್ ಅಹಮದ್ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು.
ಹೇಗಾಗಿತ್ತು ಅಪಘಾತ?
ಮಹಾವೀರ ವೃತ್ತದಲ್ಲಿ ಸಂಭವಿಸಿದ್ದ ಅಪಘಾತದ ಸಿಸಿಟಿವಿ ದೃಶ್ಯ ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ. ಇಕ್ಬಾಲ್ ಅಹಮದ್ ತಮ್ಮ ಹೋಂಡಾ ಆಕ್ಟೀವಾ ಬೈಕಿನಲ್ಲಿ ಗೋಪಿ ವೃತ್ತದ ಕಡೆಯಿಂದ ಕೆಇಬಿ ಸರ್ಕಲ್ ಕಡೆಗೆ ತೆರಳುತ್ತಿದ್ದರು. ಅವರ ಹಿಂಬದಿಯಲ್ಲೆ ಬಂದ ಸಿಟಿ ಬಸ್ (city bus) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇಕ್ಬಾಲ್ ಅಹಮದ್ ಅವರು ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಅವರ ಹೆಲ್ಮೆಟ್ ಹಾರಿ ಹೋಗಿರುವುದು ಸಿಸಿಟಿವಿ ಸೆರೆಯಾಗಿದೆ.
WATCH VIDEO
18 ದಿನ ನಿರಂತರ ಚಿಕಿತ್ಸೆ
ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಇಕ್ಬಾಲ್ ಅಹಮದ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ 18 ದಿನ ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೂ.2ರಂದು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಮೊಹಮ್ಮದ್ ಹಮೀದ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಮನೆ ಒಡೆಯನಿಲ್ಲದೆ ಸಂಕಷ್ಟ
ಹೇಗಾದರು ಮಾಡಿ ಇಕ್ಬಾಲ್ ಅಹಮದ್ ಅವರನ್ನು ಉಳಿಸಿಕೊಳ್ಳಬೇಕು ಎಂದು ಕುಟುಂಬದವರು ಲಕ್ಷ ಲಕ್ಷ ರೂ. ಖರ್ಚು ಮಾಡಿದ್ದಾರೆ. ದೇವರ ಮೊರೆ ಹೋಗಿದ್ದರು. ಅದರೆ ಯಾವುದು ಕೈಗೂಡಲಿಲ್ಲ. ಈಗ ಮನೆ ಒಡೆಯನಿಲ್ಲದೆ ಕುಟುಂಬ ಸಂಕಷ್ಟಕ್ಕೀಡಾಗಿದೆ.
ಇದನ್ನೂ ಓದಿ – ಹೊಳಲೂರು ಬಳಿ ಅಪಘಾತ, ಹೊನ್ನಾಳಿಯ ವ್ಯಕ್ತಿ ದುರ್ಮರಣ, ಏರ್‌ಬ್ಯಾಗ್ ಉಳಿಸಿತು ತಾಯಿ, ಮಗನ ಪ್ರಾಣ
ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಅಪಘಾತಗಳು ನಿರಂತರವಾಗಿವೆ. ಆಗಾಗ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದು, ಹಲವರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ವಾಹನ ಸವಾರರು ಅಜಾಗರೂಕತೆಯ ಚಾಲನೆಯೆ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ವೃತ್ತದಲ್ಲಿ ಅಪಘಾತ ತಡೆಯಲು ಅಧಿಕಾರಿಗಳು ಪ್ರಯತ್ನ ಮಾಡಬೇಕಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422