ಶಿವಮೊಗ್ಗ ಪಾಲಿಕೆ ಕಮಿಷನರ್‌ ಹೆಸರಿನಲ್ಲಿ ನಕಲಿ ವಾಟ್ಸಪ್‌, ಅಧಿಕಾರಿಗಳಿಗೆ ಮೆಸೇಜ್‌

ಶಿವಮೊಗ್ಗ: ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಸೈಬರ್ ವಂಚಕರು ಇತರೆ ಅಧಿಕಾರಿಗಳಿಗೆ ಮೆಸೇಜ್‌ ಕಳುಹಿಸುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ (commissioner) ಮಾಯಣ್ಣ ಗೌಡ.ಕೆ ಅವರ ಹೆಸರಿನಲ್ಲಿ ನಕಲಿ ವಾಟ್ಸಾಪ್‌ ಖಾತೆ ಸೃಷ್ಟಿಸಲಾಗಿದೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಘಟನೆಯ ವಿವರ

ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರ ಭಾವಚಿತ್ರವನ್ನು ಕದ್ದು, ಸೈಬರ್‌ ವಂಚಕರು ವಿದೇಶಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಗೆ ಡಿಪಿಯಾಗಿ ಬಳಸಿಕೊಂಡಿದ್ದರು. ಆಯುಕ್ತರಂತೆ ನಟಿಸಿ ಪಾಲಿಕೆಯ ಇತರ ಅಧಿಕಾರಿಗಳಿಗೆ ಮೆಸೇಜ್‌ ಕಳುಹಿಸಿದ್ದಾರೆ. ಈ ಪ್ರಕರಣ ಏಪ್ರಿಲ್ 20ರಂದು ಬೆಳಕಿಗೆ ಬಂದಿದೆ.

Shimoga-Mahanagara-Palike-Commissioner-Mayanna-Gowda-files-Complaint-at-CEN-Station

Shimoga-Mahanagara-Palike-Commissioner-Mayanna-Gowda-files-Complaint-at-CEN-Station

ದೂರು ದಾಖಲಿಸಿದ ಕಮಿಷನರ್‌

ವಿಷಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಆಯುಕ್ತರು, ಕೂಡಲೇ ದೂರು ನೀಡಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಗಡುವು ನೀಡಿದ ಶಾಸಕ

ಒಂದೇ ವಾರದಲ್ಲಿ ಎರಡನೇ ಕೇಸ್‌

ಹಿರಿಯ ಅಧಿಕಾರಿಗಳ ಫೋಟೊಗಳನ್ನು ಬಳಸಿಕೊಂಡು ನಕಲಿ ವಾಟ್ಸಪ್‌ ಖಾತೆಗಳ ಮೂಲಕ ಅಧಿಕಾರಿಗಳಿಗೆ ಮೆಸೇಜ್‌ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಎನ್. ಅವರ ಹೆಸರಿನಲ್ಲಿಯೂ ಇದೇ ಮಾದರಿಯ ನಕಲಿ ವಾಟ್ಸಪ್‌ ಖಾತೆ ಸೃಷ್ಟಿಸಲಾಗಿತ್ತು. ಈ ಸಂಬಂಧ ಐಎಎಸ್‌ ಅಧಿಕಾರಿ ಹೇಮಂತ್‌.ಎನ್‌ ಅವರು ಸಿ.ಇ.ಎನ್‌ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ 

Leave a Comment