ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 21 SEPTEMBER 2024 : ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರ (City) ಹಸಿರುಮಯವಾಗಿದೆ. ಎಲ್ಲೆಡೆ ಹಸಿರು ಧ್ವಜಗಳು ರಾರಾಜಿಸುತ್ತಿವೆ. ವಿವಿಧೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಸೆ.22ರಂದು ಶಿವಮೊಗ್ಗ ನಗರದಲ್ಲಿ ಈದ್ ಮೆರವಣಿಗೆ ಆಯೋಜಿಸಲಾಗಿದೆ. ಹಾಗಾಗಿ ಮುಸ್ಲಿಂ ಸಮುದಾಯದ ವತಿಯಿಂದ ನಗರದಾದ್ಯಂತ ಅಲಂಕಾರ ಮಾಡಲಾಗಿದೆ.
ಎಲ್ಲೆಲ್ಲಿ ಹೇಗಿದೆ ಅಲಂಕಾರ?
ಅಮೀರ್ ಅಹಮದ್ ಸರ್ಕಲ್ ಹಸಿರುಮಯವಾಗಿದೆ. ಸರ್ಕಲ್ ಸುತ್ತಲು ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಧ್ಯದಲ್ಲಿ ಮೆಕ್ಕಾ ಮದೀನ ಮಾದರಿಯ ಅಲಂಕಾರ ಮಾಡಲಾಗಿದೆ.

ಇನ್ನು, ಕೆ.ಆರ್.ಪುರಂ, ಎಂ.ಕೆ.ಕೆ ರಸ್ತೆಯಲ್ಲಿ ವಿದ್ಯುತ್ ದಿಪಾಲಂಕಾರ ಮಾಡಲಾಗಿದೆ. ಅಲ್ಲದೆ ರಸ್ತೆಯ ಪ್ರವೇಶದಲ್ಲಿ ಕಮಾನು ನಿರ್ಮಿಸಲಾಗಿದೆ. ನೆಹರು ರಸ್ತೆ, ಬಿ.ಹೆಚ್.ರಸ್ತೆಯಲ್ಲಿ ಹಸಿರು ಧ್ವಜ, ಬಂಟಿಂಗ್ಸ್‌ಗಳನ್ನು ಹಾಕಲಾಗಿದೆ.

ಅಲಂಕಾರ ಕಣ್ತುಂಬಿಕೊಳ್ಳಲು ಮುಸ್ಲಿಂ ಸಮುದಾಯದವರು ಕುಟುಂಬ ಸಹಿತ ಸರ್ಕಲ್ ಬಳಿ ಆಗಮಿಸುತ್ತಿದ್ದಾರೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತೊಂದು ನಗರಕ್ಕೆ ವಿಮಾನಯಾನ, ದಿನಾಂಕ ಫಿಕ್ಸ್
LATEST NEWS
- ದಿಢೀರ್ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದ ಕಾಡುಕೋಣ

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 10 ಫೆಬ್ರವರಿ 2026

- ಶಿವಮೊಗ್ಗ ವಿಮಾನ ನಿಲ್ದಾಣ, ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದ ರಾಘವೇಂದ್ರ

- ಶಿವಮೊಗ್ಗದಲ್ಲಿ ಉಚಿತ ಆರ್ಯುವೇದ ಆರೋಗ್ಯ ತಪಾಸಣಾ ಶಿಬಿರ, ಈಗಲೇ ಹೆಸರು ನೋಂದಣಿಗೆ ಸೂಚನೆ

- ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು

About The Editor
ನಿತಿನ್ ಆರ್.ಕೈದೊಟ್ಲು





