ಪೊಲೀಸ್‌ ಠಾಣೆಯಲ್ಲಿ ದುರ್ಗಿಗುಡಿಯ ಬಟ್ಟೆ ಅಂಗಡಿ ಕೆಲಸಗಾರರು, ಮಾಲೀಕನಿಗೆ ಸನ್ಮಾನ

ಶಿವಮೊಗ್ಗ: ಬಟ್ಟೆ ಅಂಗಡಿಯೊಂದರಲ್ಲಿ (clothing store) ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ವ್ಯಾನಿಟಿ ಬ್ಯಾಗ್‌ನ್ನು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸಿದ ಅಂಗಡಿಯ ಕೆಲಸಗಾರರು ಮತ್ತು ಮಾಲೀಕರನ್ನು ಜಯನಗರ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಇದನ್ನೂ ಓದಿ : ಶಿವಮೊಗ್ಗದಲ್ಲಿ ಬೈಕ್‌ ನಂಬರ್‌ ಪ್ಲೇಟ್‌ಗೆ ಸ್ಟಿಕ್ಕರ್‌ ಅಂಟಿಸಿದ್ದರೂ ಬಿತ್ತು ಭಾರಿ ದಂಡ

Police-filicitate-cloth-shop-owner-and-workers-at-Jayanagara-station

ದುರ್ಗಿಗುಡಿಯ ನ್ಯೂ ಇತಿಹಾಸ್‌ ಕಲೆಕ್ಷನ್‌ ಬಟ್ಟೆ ಅಂಗಡಿಯಲ್ಲಿ ಗಾಯತ್ರಿ ಎಂಬುವವರು ತಮ್ಮ ವ್ಯಾನಿಟಿ ಬ್ಯಾಗ್‌ ಅನ್ನು ಮರೆತು ಹೋಗಿದ್ದರು. ಇದನ್ನು ಗಮನಿಸಿದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ ಮತ್ತು ಸಂಗೀತಾ ವ್ಯಾನಿಟಿ ಬ್ಯಾಗ್‌ ಅನ್ನು ಅಂಗಡಿ ಮಾಲೀಕ ಮಾರ್ತಾಂಡ ಅವರಿಗೆ ನೀಡಿದ್ದರು.

Shivamogga Live Promotion

Police-filicitate-cloth-shop-owner-and-workers-at-Jayanagara-station

ಈ ಬ್ಯಾಗ್‌ನಲ್ಲಿ ₹5 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಇತ್ತು. ಮಂಗಳವಾರ ಜಯನಗರ ಪೊಲೀಸ್‌ ಠಾಣೆಗೆ ಸ್ವಾತಿ, ಸಂಗೀತಾ ಹಾಗೂ ಮಾರ್ತಾಂಡ ಅವರು ಬಂದು ಪೊಲೀಸರ ಸಮಕ್ಷಮ ಬ್ಯಾಗ್‌ನ್ನು ಗಾಯತ್ರಿ ಅವರಿಗೆ ನೀಡಿದ್ದಾರೆ. ಬ್ಯಾಗ್‌ ಹಿಂತಿರುಗಿಸಿ ಪ್ರಾಮಾಣಿಕತೆ ತೋರಿದ ಸ್ವಾತಿ, ಸಂಗೀತಾ ಹಾಗೂ ಮಾರ್ತಾಂಡ ಅವರನ್ನು ಠಾಣೆಯಲ್ಲಿ ಸನ್ಮಾನಿಸಲಾಯಿತು.

ಇದನ್ನೂ ಓದಿ 

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment