ಮಹಿಳಾ ಅಧಿಕಾರಿಗೆ ಮಧ್ಯರಾತ್ರಿ ಫೋನ್ ಮಾಡಿ ಕಿರಿಕಿರಿ, ವಾಟ್ಸಪ್ ಡಿಪಿಯಲ್ಲಿ ಫೋಟೋ ಹಾಕಿ ಮಾನಸಿಕ ಹಿಂಸೆ, ಕೇಸ್ ದಾಖಲು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021

ಮಹಿಳಾ ಅಧಿಕಾರಿಯೊಬ್ಬರಿಗೆ ರಾತ್ರಿಯಲ್ಲ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ತಲಾಷ್ ನಡೆಸುತ್ತಿದ್ದಾರೆ.

AVvXsEg7D64eppM2Y2YXBDC80Q2TdBmP2uvjR kzBF IPI

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರಿಗೆ ಚಿತ್ರಪ್ಪ ಎಂಬಾತ ರಾತ್ರಿಯಲ್ಲ ಕರೆ ಮಾಡುತ್ತಿದ್ದಾರೆ. ವಾಟ್ಸಪ್ ಡಿಪಿಯಲ್ಲಿ ಮಹಿಳಾ ಅರಣ್ಯಾಧಿಕಾರಿ ಫೋಟೊ ಹಾಕಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ? ದೂರಿನಲ್ಲಿ ಏನಿದೆ?

ಆನೆ ತುಳಿದು ಬೆಳೆ ಹಾನಿಯಾಗಿದೆ. ತಮಗೆ ಪರಿಹಾರಿ ಕೊಡಿಸಿ ಎಂದು ಚಿತ್ರಪ್ಪ ಎಂಬುವವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಕರೆ ಮಾಡಿದ್ದಾರೆ. ತಡರಾತ್ರಿಯಲ್ಲ ಕರೆ ಮಾಡಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಅಸಭ್ಯವಾಗಿಯೂ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎಸಿಎಫ್ ಕಚೇರಿಗೂ ಚಿತ್ರಪ್ಪ ಪದೇ ಪದೇ ಭೇಟಿ ನೀಡಿ, ಏಕ ವಚನದಲ್ಲಿ ಮಾತನಾಡಿ ಅವಮಾನ ಮಾಡುತ್ತಿದ್ದರು. ಅಲ್ಲದೆ ಚಿತ್ರಪ್ಪ ತಮ್ಮ ವಾಟ್ಸಪ್’ನಲ್ಲಿ ಮಹಿಳಾ ಎಸಿಎಫ್ ಫೋಟೋ ಹಾಕಿಕೊಂಡಿದ್ದರು. ಇದರಿಂದ ತಮ್ಮ ಕೌಟುಂಬಿಕ ಜೀವನ ಮತ್ತು ಸರ್ಕಾರಿ ಕರ್ತವ್ಯ ನಿರ್ವಹಣೆಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಎಸಿಎಫ್ ದೂರಿನಲ್ಲಿ ತಿಳಿಸಿದ್ದಾರೆ

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ.

shivamogga live subscribe band

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment