ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA CITY COMPLETE NEWS, 3 SEPTEMBER 2024 : ಶಿವಮೊಗ್ಗ ನಗರದಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ಸುದ್ದಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿಜೆಪಿ ಕಚೇರಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಅನಾವಶ್ಯಕ ಮಾತುಗಳನ್ನು ಆಡಿರುವ ಮಾಜಿ ಸಂಸದ ಆಯನೂರು ಮಂಜುನಾಥ್ ಕ್ಷಮೆ ಕೇಳಬೇಕು. ಯಡಿಯೂರಪ್ಪ ಅವರಿಂದಲೆ ಆಯನೂರು ಮಂಜುನಾಥ್ ಸ್ಥಾನಮಾನ ಪಡೆದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.» ‘ಆಯನೂರು ಮಂಜುನಾಥ್ ಕ್ಷಮೆ ಕೇಳಲಿ’
ಪತ್ರಿಕಾ ಭವನ : ಸೆ.4ರಂದು ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೊಳಲೆ ಕೆ.ಎನ್.ರುದ್ರಪ್ಪ ಅವರ ಕುರಿತು ಕೊಳಲೆ ಕೆ.ಎನ್.ರುದ್ರಪ್ಪ ಮತ್ತು ಮಲೆನಾಡು ಕಥಾನಕ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ ಎಂದು ಕೃತಿಯ ಸಹ ಸಂಪಾದಕ ಖಲೀಮುಲ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.» ನಾಳೆ ಪುಸ್ತಕ ಬಿಡುಗಡೆ
ಜಿಲ್ಲಾಧಿಕಾರಿ ಕಚೇರಿ : ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ರೋಟರಿ ಕ್ಲಬ್, ಇನ್ನರ್ ವೀಲ್, ಒಕ್ಕಲಿಗರ ಮಹಿಳಾ ವೇದಿಕೆ, ದೈವಜ್ಞ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಮೀರ್ ಅಹಮದ್ ಸರ್ಕಲ್ನಿಂದ ಮೆರವಣಿಗೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ.» ಕಠಿಣ ಶಿಕ್ಷೆಗೆ ಆಗ್ರಹ, ನಗರದಲ್ಲಿ ಮೆರವಣಿಗೆ
ಪತ್ರಿಕಾ ಭವನ : ಕಲ್ಲಹಳ್ಳಿ ಹುಡ್ಕೊ ಕಾಲೋನಿಯ ತಿಮ್ಮಕ್ಕ ಲೇಔಟ್ನಲ್ಲಿ ನಿರ್ಮಿಸಲಾಗಿರುವ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದನ್ನು ಸೆ.5ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ತಾರಾನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.» ನೂತನ ಕಟ್ಟಡ ಉದ್ಘಾಟನೆ
ಬಿಜೆಪಿ ಕಚೇರಿ : ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿಯಾಗಿದೆ. ಮೊದಲ ಬಜೆಟ್ನಲ್ಲಿ 13,500 ಕೋಟಿ ರೂ., ಎರಡನೇ ಬಜೆಟ್ನಲ್ಲಿ 25 ಸಾವಿರ ಕೋಟಿ ರೂ. ಸಾಲ ತೋರಿಸಲಾಗಿದೆ. ಮೂರನೆ ಬಜೆಟ್ನಲ್ಲಿ ಸಾಲದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಜಿ ಶಾಸಕ ಪಿ.ರಾಜೀವ್ ಕುಡುಚಿ ಅರೋಪಿಸಿದರು.» ರಾಜ್ಯ ಸರ್ಕಾರ ದಿವಾಳಿಯಾಗಿದೆ
ಶಾಸಕರ ಕಚೇರಿ : ನಗರದ 27ನೇ ವಾರ್ಡ್ನಲ್ಲಿರುವ ಆನಂದರಾವ್ ಬಡಾವಣೆಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಪುಂಡರ ಹಾವಳಿ ಹೆಚ್ಚಾಗಿದೆ. ಗಾಂಜಾ ಸೇವಿಸಿ ಉಪಟಳ ನೀಡಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ವೀರಕೇಸರಿ ಹನುಮಾನ್ ಸೇವಾ ಸಂಘದ ವತಿಯಿಂದ ಶಾಸಕ ಎಸ್.ಎನ್.ಚನ್ನಬಸಪ್ಪಗೆ ಮನವಿ.» ನೀರು ಬರ್ತಿಲ್ಲ, ಪುಂಡರ ಹಾವಳಿ ತಪ್ಪಿಸಿ
ಪತ್ರಿಕಾ ಭವನ : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.5ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.» ಶಿವಮೊಗ್ಗಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ
ಜಿಲ್ಲಾಧಿಕಾರಿ ಕಚೇರಿ : ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮೂರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ. ಸೆ.20ರವರೆಗೆ ಬೈಕ್ ರಾಲಿಗಳಿಗೆ ನಿಷೇಧ. ಹಬ್ಬಗಳ ಸಂದರ್ಭ ಡಿಜೆ ಬಳಸುವಂತಿಲ್ಲ. ಗಣಪತಿ ವಿಸರ್ಜನೆಗೆ ತೆಪ್ಪ ಬಳುಸುವಾಗ ನುರಿತ ಈಜು ತಜ್ಞರು ಇರಬೇಕು. ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿದ ಮೂರರಿಂದ ನಾಲ್ಕು ಜನರು ಮಾತ್ರ ತೆಪ್ಪದಲ್ಲಿ ಹೋಗಬೇಕು ಎಂದು ಆದೇಶಿಸಿದ್ದಾರೆ.» ಡಿಜೆ, ಬೈಲ್ ರಾಲಿ ಬ್ಯಾನ್
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ರಾಷ್ಟ್ರೀಯ ಪೋಷಕಾಂಶ ಸಪ್ತಾಹ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ್ ಕುಲಕರ್ಣಿ ಉದ್ಘಾಟಿಸಿದರು. ಉತ್ತಮ ಜೀವನಶೈಲಿ, ಆಹಾರ ಕ್ರಮ ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದು ಎಂದರು.» ಸರ್ಜಿ ಆಸ್ಪತ್ರೆಯಲ್ಲಿ ಪೋಷಕಾಂಶ ಸಪ್ತಾಹ
ಜೆಡಿಎಸ್ ಕಚೇರಿ : ಯುವ ಜನತಾ ದಳ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ಅಭಿಯಾನ. ಶಿವಮೊಗ್ಗ ನಗರ ಯುವ ಜನತಾ ದಳದ ವಾರ್ಡ್ ಸಮಿತಿ ಮತ್ತು ವಾರ್ಡ್ ಅಧ್ಯಕ್ಷರ ನೇಮಕ ಪಟ್ಟಿಯನ್ನು ಯುವ ಜನತಾ ದಳದ ಜಿಲ್ಲಾಧ್ಯಕ್ಷ ಮಧುಕುಮಾರ್ಗೆ ಹಸ್ತಾಂತರಿಸಿದ ನಗರ ಅಧ್ಯಕ್ಷ ಸಂಜಯ್ ಕಶ್ಯಪ್. ಶಾಸಕಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್, ಕೆ.ಬಿ.ಪ್ರಸನ್ನ ಕುಮಾರ್ ಸೇರಿ ಹಲವರು ಇದ್ದರು.» ಯುವ ಜೆಡಿಎಸ್ ಕಾರ್ಯಕರ್ತರ ಸಭೆ
ಇದನ್ನೂ ಓದಿ » ‘ಸಂಜೆ 6 ಗಂಟೆಗೆ ಮನೆ ಸೇರದಿದ್ದರೆ ಊರು ಬಿಡಬೇಕುʼ, ಕಸ್ತೂರಿ ರಂಗನ್ ವರದಿ ಬಗ್ಗೆ ಮಿನಿಸ್ಟರ್ ಮಹತ್ವದ ಹೇಳಿಕೆ