ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ನಿರ್ಮಾಣ ಹಂತದ ಮನೆಯಲ್ಲಿಟ್ಟಿದ್ದ ಪ್ಲಂಬಿಂಗ್ (Plumbing) ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಆಲ್ಕೊಳದ ಐಶ್ವರ್ಯ ಎನ್‌ಕ್ಲೇವ್ ಬಡಾವಣೆಯಲ್ಲಿ ಶ್ರೀಹರ್ಷ ಎಂಬುವವರು ನಿರ್ಮಿಸುತ್ತಿರುವ ಮನೆಯಲ್ಲಿ ಸುಮಾರು 2.50 ಲಕ್ಷ ಮೌಲ್ಯದ ಪ್ಲಂಬಿಂಗ್ ವಸ್ತುಗಳು ಕಳ್ಳತನವಾಗಿವೆ.
ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ
ಪ್ಲಂಬಿಂಗ್ (Plumbing) ಸಾಮಗ್ರಿಗಳನ್ನು ನಿರ್ಮಾಣ ಹಂತದ ಮನೆಯ ಬೆಡ್ ರೂಮ್ ಮತ್ತು ಹೆಡ್ ರೂಮ್‌ಗಳಲ್ಲಿ ಇರಿಸಿ ಬಾಗಿಲು ಹಾಕಲಾಗಿತ್ತು. ಮಾ.27ರಂದು ಬೆಳಗ್ಗೆ ಶ್ರೀಹರ್ಷ ಮನೆಗೆ ಬಂದಾಗ ಪ್ಲಂಬಿಂಗ್ ಸಾಮಗ್ರಿಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.

ನಿರ್ಮಾಣ ಹಂತದ ಮನೆಯ ಮೊದಲ ಮಹಡಿಯಲ್ಲಿರುವ ಕಿಟಕಿಗೆ ಸರಳು ಅಳವಡಿಸಿರಲಿಲ್ಲ. ಇಲ್ಲಿಂದ ಒಳಗೆ ನುಗ್ಗಿರುವ ಕಳ್ಳರು ಪ್ಲಂಬಿಂಗ್ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





