‘ಚಳಿಗಾಲದಲ್ಲಿ ಬಿಜೆಪಿ, ಬೇಸಿಗೆಯಲ್ಲಿ ಜೆಡಿಎಸ್‌, ಮಳೆಗಾಲದಲ್ಲಿ ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ’, ಆಯನೂರು ವಿರುದ್ಧ ಗರಂ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 20 AUGUST 2023

SHIMOGA : ಚಳಿಗಾಲದಲ್ಲಿ ಬಿಜೆಪಿ, ಬೇಸಿಗೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಜಿಗಿದಿದ್ದ ಮಾಜಿ ಶಾಸಕ ಆಯನೂರು ಮಂಜನಾಥ್‌ ಮಳೆಗಾಲದ ಹೊತ್ತಿಗೆ ಕಾಂಗ್ರೆಸ್‌ ಪಕ್ಷದ (Congress Party) ಕದ ತಟ್ಟುತ್ತಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿಲ್ಲಾ ಕಾಂಗ್ರೆಸ್‌ ನಾಯಕರಲ್ಲಿ ವಿರೋಧವಿದೆ ಎಂದು ಮಹಾನಗರ ಪಾಲಿಕೆ ಸದಸ್ಯ, ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಹೆಚ್‌.ಸಿ.ಯೋಗೇಶ್‌ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌.ಸಿ.ಯೋಗೇಶ್‌, ಮೂರು ಋತುಗಳಲ್ಲಿ ಮೂರು ಪಕ್ಷಗಳನ್ನು ನೋಡಿದ ಕೀರ್ತಿ ಆಯನೂರು ಮಂಜುನಾಥ್‌ ಅವರಿಗೆ ಸಲ್ಲುತ್ತದೆ ಎಂದು ಲೇವಡಿ ಮಾಡಿದರು.

ಸಚಿವರು, ಶಾಸಕರ ಮನೆ ಬಾಗಿಲಿಗೆ

ಸಚಿವರು (Minister), ಕಾಂಗ್ರೆಸ್‌ ಪಕ್ಷದ ಶಾಸಕರ (MLA) ಮನೆಗಳಿಗೆ ಆಯನೂರು ಮಂಜುನಾಥ್‌ ಭೇಟಿ ನೀಡುತ್ತಿದ್ದಾರೆ. ತಾನು ಕಾಂಗ್ರೆಸ್‌ ಪಕ್ಷ ಸೇರುತ್ತಿರುವುದಾಗಿ ತಿಳಿಸುತ್ತಿದ್ದಾರೆ. ವಿಧಾನ ಪರಿಷತ್‌ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆ ಮತ್ತು ಸಂಪನ್ಮೂಲಕ್ಕಾಗಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ. ಎಲ್ಲರು ಸೇರಿ ಸಂಘಟನೆ ಮಾಡುತ್ತೇವೆ. ಆಯನೂರು ಮಂಜುನಾಥ್‌ ಅವರನ್ನು ಕಾಂಗ್ರೆಸ್‌ ಪಕ್ಷಕೆ ಸೇರಿಸಿಕೊಳ್ಳಬಾರದು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ, ಮೇಲ್ಛಾವಣಿ, ವಸ್ತುಗಳು ಆಹುತಿ, ಪರಿಹಾರದ ಭರವಸೆ

ವೈಯಕ್ತಿಕ ವಿಚಾರದ ಟೀಕೆ

ಬೇರೆ ಪಕ್ಷಗಳಲ್ಲಿ ಇದ್ದಾಗ ಅಲ್ಲಿಯ ನಾಯಕರನ್ನು ಮೆಚ್ಚಿಸಲು ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್‌ ಪಕ್ಷದ ವರಿಷ್ಠರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಟೀಕೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಮ್‌ ಇದ್ದರೆ ಎಂದು ಸವಾಲು ಹಾಕಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ವಿರುದ್ಧವು ಟೀಕಿಸಿದ್ದರು. ಈಗ ಪಕ್ಷ ಸೇರಲು ಕಾಂಗ್ರೆಸ್‌ ಮುಖಂಡರ ಮನೆ ಬಾಗಿಲಿಗೆ ಹೋಗಿದ್ದಾರೆ. ಆಯನೂರು ಮಂಜುನಾಥ್‌ ಅವರಿಗೆ ದಮ್‌ ಇದ್ದರೆ ಜೆಡಿಎಸ್‌ ಪಕ್ಷದಲ್ಲಿಯೇ ಉಳಿಯಲಿ ಎಂದು ಸವಾಲು ಹಾಕಿದರು.

HC-Yogesh-shimoga-Corporator-Press-Meet

ಇದನ್ನೂ ಓದಿ – ಕಾಂಗ್ರೆಸ್‌ ಪಕ್ಷದಿಂದ 3 ಗ್ರಾಮ ಪಂಚಾಯಿತಿ ಸದಸ್ಯರು, ಇಬ್ಬರು ಕಾರ್ಯಕರ್ತರು, 6 ವರ್ಷ ಉಚ್ಛಾಟನೆ

ಈಶ್ವರಪ್ಪ, ಆಯನೂರು ಗಲಾಟೆ ಅಭಿವೃದ್ಧಿಗಲ್ಲ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಆಯನೂರು ಮಂಜುನಾಥ್‌ ಅವರ ಮಧ್ಯೆ ವೈಮನಸ್ಸಿಗೆ ಕಾರಣವಾಗಿದ್ದು ಅಭಿವೃದ್ಧಿಯ ವಿಚಾರವಲ್ಲ. ಸಭೆ, ಸಮಾರಂಭಗಳಿಗೆ ಆಯನೂರು ಮಂಜುನಾಥ್‌ ಅವರನ್ನು ಆಹ್ವಾನಿಸುತ್ತಿರಲಿಲ್ಲ. ಶಿಷ್ಟಾಚಾರದ ಕಾರಣಕ್ಕೆ ಗಲಾಟೆಯಾಗಿದೆ. ಆನಂತರ ಆಯನೂರು ಮಂಜುನಾಥ್‌ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಸೇರಿದಂತೆ ನಾಲ್ಕೈದು ಜನರನ್ನು ಕರೆದೊಯ್ದಿದ್ದರು. ಈಗ ಅವರನ್ನೆಲ್ಲ ಅಲ್ಲಿಯೇ ಬಿಟ್ಟು ಆಯನೂರು ಮಂಜುನಾಥ್‌ ಕಾಂಗ್ರೆಸ್‌ ಪಕ್ಷದ ಕದ ತಟ್ಟುತ್ತಿದ್ದಾರೆ. ಇವರ ರಾಜಕೀಯ ಟೂರಿಂಗ್‌ ಟಾಕೀಸ್‌ ಮಾದರಿಯಾಗಿದೆ ಎಂದು ಯೋಗೇಶ್‌ ಟೀಕಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್‌, ಪ್ರಮುಖರಾದ ವಿಶ್ವನಾಥ ಕಾಶಿ, ರಂಗೇಗೌಡ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment