ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಇಲ್ಲಿನ ಮಂಡಘಟ್ಟ ನಿವಾಸಿ ಶಿವಕುಮಾರ್ ಎಸ್. ಅವರಿಗೆ ₹25,000 ಪರಿಹಾರ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ಲಿಪ್‌ಕಾರ್ಟ್ (flipkart) ಹಾಗೂ ಮಾರಾಟಗಾರ ಸಂಸ್ಥೆಗೆ ಆದೇಶಿಸಿದೆ.
1 ಲೀಟರ್ ಏಷ್ಯನ್ ವುಡ್ ಪ್ರೈಮರ್‌ಗೆ ಎಂಆರ್‌ಪಿಗಿಂತಲೂ ಹೆಚ್ಚು ಹಣ ಪಡೆಯಲಾಗಿದೆ ಎಂದು ಶಿವಕುಮಾರ್, ಪ್ಲಿಪ್‌ಕಾರ್ಟ್ ಬೆಂಗಳೂರು ವಿಭಾಗದ ಮುಖ್ಯ ವ್ಯವಸ್ಥಾಪಕ ಹಾಗೂ ಉತ್ತರಪ್ರದೇಶದ ಮುಜಾಫರ್ ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ವಿರುದ್ಧ ದೂರು ಸಲ್ಲಿಸಿದ್ದರು.
ಹೆಚ್ಚುವರಿ ಹಣ ಎಷ್ಟು ಪಡೆದಿದ್ದರು?
ಶಿವಕುಮಾರ್ ಅವರು ಪ್ಲಿಪ್‌ಕಾರ್ಟ್ ಮೂಲಕ 1 ಲೀಟರ್ ವುಡ್ ಪ್ರೈಮರ್ ಅನ್ನು ಶೇ.76ರಷ್ಟು ರಿಯಾಯಿತಿ ದರದಲ್ಲಿ ₹540ಕ್ಕೆ ಖರೀದಿಸಿದ್ದರು. ಇದಕ್ಕೆ ₹41 ಶಿಪ್ಪಿಂಗ್ ಶುಲ್ಕ ವಿಧಿಸಲಾಗಿತ್ತು. ಆದರೆ, ಡಬ್ಬಿಯನ್ನು ಪರಿಶೀಲಿಸಿದಾಗ ಎಂಆರ್‌ಪಿ ಬೆಲೆಯನ್ನು ಅಳಿಸಿ ಅದರ ಮೇಲೆ ಬಿಳಿ ಕಾಗದ ಅಂಟಿಸಲಾಗಿತ್ತು. ಅದರ ಮೂಲ ದರ ₹324 ಎಂಬುದು ಬಳಿಕ ಗೊತ್ತಾಗಿತ್ತು. ತಮ್ಮಿಂದ ₹216 ಹೆಚ್ಚುವರಿ ಮೊತ್ತ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ನೊಟೀಸ್‌ಗೆ ಉತ್ತರ ನೀಡಿರಲಿಲ್ಲ
ಹೆಚ್ಚುವರಿ ಮೊತ್ತವನ್ನು ಮರುಪಾವತಿಸುವಂತೆ ಮಾರಾಟಗಾರರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಇದು ಸೇವಾ ನ್ಯೂನತೆಗೆ ಸಾಕ್ಷಿ ಎಂದು ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ದೂರುದಾರರ ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಎಂಆರ್‌ಪಿಗಿಂತ ಹೆಚ್ಚು ಹಣ ಪಡೆದಿರುವುದು ಸೇವಾ ನ್ಯೂನತೆ ಎಂದು ತೀರ್ಮಾನಿಸಿತ್ತು.

ಶೇ.12ರ ಬಡ್ಡಿ ದರಲ್ಲಿ ಹಣ ಹಿಂತಿರುಗಿಸಿ
ದೂರನ್ನು ಭಾಗಶಃ ಪುರಸ್ಕರಿಸಿರುವ ಆಯೋಗ, ಹೆಚ್ಚುವರಿಯಾಗಿ ಪಡೆದ ₹216 ಮೊತ್ತಕ್ಕೆ 2024ರ ಸೆ.13ರಿಂದ ವಾರ್ಷಿಕ ಶೇ.9ರ ಬಡ್ಡಿ ವಿಧಿಸಿದೆ. ಒಟ್ಟು ಮೊತ್ತವನ್ನು 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದಲ್ಲಿ ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಹಣ ಪಾವತಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ – ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?
ಮಾನಸಿಕ ಹಿಂಸೆ ಹಾಗೂ ದೂರಿನ ವೆಚ್ಚಕ್ಕಾಗಿ ₹25,000 ಪರಿಹಾರ ನೀಡುವಂತೆ ಸೂಚಿಸಲಾಗಿದ್ದು ಈ ಮೊತ್ತವನ್ನೂ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ. ವಿಳಂಬವಾದಲ್ಲಿ ವಾರ್ಷಿಕ ಶೇ 12ರ ಬಿಡ್ಡಿಯೊಂದಿಗೆ ಪಾವತಿಸಬೇಕು ಎಂದೂ ನಿರ್ದೇಶಿಸಿದೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಡಿ. 31ರಂದು ಈ ಆದೇಶ ನೀಡಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ ಎಂ.ಟಿ. ತಿಳಿಸಿದ್ದಾರೆ.


LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು















