ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA CITY | 12 ಮೇ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಸೋಂಕಿನಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ವೈರಸ್‍ನಿಂದ ತಪ್ಪಿಸಿಕೊಳ್ಳಲು ಅನೇಕ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ ಶಿವಮೊಗ್ಗದ ರೈತರು ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಕರೋನ ಜೊತೆಗೆ ಜೀವಿಸೋದನ್ನ ಕಲಿಯೋಣ ಅಂತಾ ಪ್ರಮಾಣ ಸ್ವೀಕರಿಸಿದ್ದಾರೆ.
ಕರೋನ ಜೊತೆಗೆ ಜೀವನ, ಹೇಗದು?
ಕರೋನ ವೈರಸ್ ಮಟ್ಟಹಾಕಲು ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಕರೋನ ಜೊತೆಗೆ ಅನಿವಾರ್ಯವಾಗಿ ಬದುಕಬೇಕಿದೆ. ಈ ಸಂದರ್ಭದಲ್ಲಿ ಏನೇನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಅವರು ರೈತರು ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಜಾಗೃತಿ ಸಂದೇಶ ಸಾರಿದ ಪತ್ರಕರ್ತ
ಫೋಟೊ ಜರ್ನಲಿಸ್ಟ್ ಶಿವಮೊಗ್ಗ ನಂದನ್ ಅವರು ಕರೋನ ನಮ್ಮನ್ನ ಬಿಟ್ಟುಹೋಗುವುದು ಕಷ್ಟ. ಆದರೆ ಅದರೊಂದಿಗೆ ಜಾಗೃತಿಯಿಂದ ಜೀವನ ನಡೆಸಬೇಕಿದೆ ಎಂದರು. ಈ ವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಿದ ರೈತರು, ಕರೋನ ಸೋಂಕಿಗೆ ತುತ್ತಾಗದಂತೆ ಜೀವ ನಡೆಸುತ್ತೇವೆ. ಬೇರೆಯವರಿಗೂ ಈ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]