ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021
ಸಾರಿಗೆ ನೌಕರರ ಮುಷ್ಕರದಿಂದಾಗಿ ಕೆಎಸ್ಆರ್ಟಿಸಿಯ ಶಿವಮೊಗ್ಗ ವಿಭಾಗಕ್ಕೆ ಕೋಟಿ ಕೋಟಿ ರೂ. ಆದಾಯ ಖೋತಾ ಆಗಿದೆ. ಯುಗಾದಿ ಹಬ್ಬ, ಸಾಲು ಸಾಲು ರಜೆಯಿಂದ ಕೆಎಸ್ಆರ್ಟಿಸಿಗೆ ದೊಡ್ಡ ಮಟ್ಟದ ಆದಾಯ ಬರುತ್ತಿತ್ತು. ಆದರೆ ಮುಷ್ಕರದಿಂದಾಗಿ ಇದಕ್ಕೆ ಬ್ರೇಕ್ ಬಿದ್ದಿದೆ.
ಕಳೆದ ಎಂಟು ದಿನದಿಂದ ನಡೆಯುತ್ತಿರುವ ಮುಷ್ಕರದಿಂದಾಗಿ ಶಿವಮೊಗ್ಗ ವಿಭಾಗಕ್ಕೆ ಮೂರು ಕೋಟಿ ರೂ. ಆದಾಯ ಖೋತಾ ಆಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರು ಕಡೆಗೆ ಹೆಚ್ಚಿನ ಬಸ್ಗಳು ಸಂಚರಿಸುತ್ತಿದ್ದವು. ಆದರೆ ಇವೆಲ್ಲ ಬಸ್ಸುಗಳನ್ನು ನಿಲ್ಲಿಸಿರುವುದರಿಂದ ಆದಾಯಕ್ಕೆ ತೊಡಕಾಗಿದೆ.
ಎರಡೆ ದಿನಕ್ಕೆ ಹತ್ತು ಲಕ್ಷ ಲಾಸ್
ಯುಗಾದಿ ಹಬ್ಬದ ಹಿನ್ನೆಲೆ ವಿವಿಧ ಜಿಲ್ಲೆಯಿಂದ ಜನರು ಶಿವಮೊಗ್ಗಕ್ಕೆ ಬಂದು ಹೋಗುತ್ತಾರೆ. ಬೆಂಗಳೂರಿನಿಂದಲೇ ಅತಿ ಹೆಚ್ಚು ಪ್ರಯಾಣಿಕರು ಬರುತ್ತಾರೆ. ಮುಷ್ಕರದಿಂದಾಗಿ ಜನರು ಖಾಸಗಿ ಟ್ರಾವಲ್ಸ್ ಮತ್ತು ರೈಲನ್ನು ಅವಲಂಬಿಸಿದ್ದರು. ಇದರಿಂದ ಶಿವಮೊಗ್ಗ ವಿಭಾಗದ ಕೆಎಸ್ಆರ್ಟಿಸಿಗೆ ಅಂದಾಜು ಹತ್ತು ಲಕ್ಷ ರೂ. ಖೋತಾ ಆಗಿರಬಹುದಾಗಿದೆ.
ಗೊಂದಲದ ನಡುವೆ, ಖಾಸಗಿಯವರಿಗೆ ಬಂಪರ್
ಖಾಸಗಿ ಟ್ರಾವಲ್ಸ್ಗಳು ಯುಗಾದಿ ಹಬ್ಬದ ರಜೆಯ ಲಾಭ ಪಡೆದುಕೊಂಡಿವೆ. ಬುಧವಾರ ರಾತ್ರಿ ಹೆಚ್ಚಿನ ಸಂಖ್ಯೆಯ ಖಾಸಗಿ ಬಸ್ಗಳು ರಸ್ತೆಗಿಳಿದಿದ್ದವು. ಈ ಪೈಕಿ ಬಹುಪಾಲು ಬಸ್ಸುಗಳು ಬೆಂಗಳೂರಿಗೆ ಸಂಚರಿಸಿದವು. ಕೆಎಸ್ಆರ್ಟಿಸಿ ನಿಲ್ದಾಣದಿಂದಲೇ ಖಾಸಗಿ ಬಸ್ಗಳು ಸಂಚಾರ ಆರಂಭಿಸಿದವು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422