ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಫೆಬ್ರವರಿ 2022
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಪಡೆಯಲು ಬ್ಯಾಂಕಿನಿಂದ 10 ಸಾವಿರ ರೂ. ಹಣ ಬಿಡಿಸಿಕೊಂಡು ಮನೆಗೆ ಮರಳುವ ವೇಳೆ ಪರ್ಸ್ ಕಳೆದುಕೊಂಡು ಚಿಂತೆಗೀಡಾಗದ್ದರು. ಆದರೆ ಆ ಚಿಂತೆ ಒಂದೇ ದಿನದಲ್ಲಿ ಮಾಯವಾಗಿ ಕಳೆದು ಹೋಗಿದ್ದ ಹಣದ ಪರ್ಸ್ ಕೈ ಸೇರಿತ್ತು.
ನಡೆದ ಘಟನೆ ಏನು?
ದುರ್ಗಿಗುಡಿ ಶ್ರೀ ಶನೇಶ್ವರ ದೇವಸ್ಥಾನ ಬಳಿ ಚಿಕ್ಕ ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿರುವ ರಫೀಕ್ ಖಾನ್ ಎಂಬುವರಿಗೆ ನಗರದ ಸವಳಂಗ ರಸ್ತೆಯಲ್ಲಿ ಪರ್ಸ್ ಸಿಕ್ಕಿತ್ತು. ಅದನ್ನು ತೆಗೆದು ನೋಡಿದಾಗ 10,202 ರೂ. ನಗದು ಮತ್ತು ಎಟಿಎಂ ಕಾರ್ಡ್ ಗಳಿದ್ದವು. ಆದರೆ ಅದರಲ್ಲಿ ಯಾರದ್ದೇ ಹೆಸರು ಇರಲಿಲ್ಲ.
ಎಟಿಎಂ ಕಾರ್ಡ್ ಆಧಾರದಲ್ಲಿ ಪತ್ತೆ
ಬ್ಯಾಂಕ್ ಎಟಿಎಂ ಕಾರ್ಡ್ ಆಧಾರದ ಮೇಲೆ ಪರ್ಸ್ ವಾರಸುದಾರರನ್ನು ಪತ್ತೆ ಮಾಡಿ ಅವರಿಗೆ ಮರಳಿ ಮಾನವೀಯತೆ ಮೆರೆದಿದ್ದಾರೆ. ಎಟಿಎಂ ಕಾರ್ಡ್ ಯಾವ ಬ್ಯಾಂಕಿನದು ಎಂದು ನೋಡಿಕೊಂಡ ಅವರು ನೇರವಾಗಿ ಬ್ಯಾಂಕಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಮೊಬೈಲ್ ನಂಬರ್ ತೆಗೆದುಕೊಂಡು ಪೋನ್ ಮಾಡಿದ್ದಾರೆ.
ಮನೆಗೆ ಹೋಗಿ ಪರ್ಸ್ ಕೊಟ್ಟರು
ಕರೆ ಸ್ವೀಕರಿಸಿದ ಮಹಿಳೆ ಜಯನಗರದ ಧನಲಕ್ಷ್ಮೀ ಎಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಪರ್ಸ್ ಸಿಕ್ಕಿದೆ, ಅದನ್ನು ತಲುಪಿಸುವ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳ ಮೂಲಕ ನಿಮ್ಮ ಮೊಬೈಲ್ ನಂಬರ್ ಪಡೆದು ಕರೆ ಮಾಡಿದ್ದೇನೆ ಎಂದು ಹೇಳಿದಾಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಎಲ್ಲಿಲ್ಲದ ಸಂತಸ. ಆಸ್ಪತ್ರೆ ಖರ್ಚಿಗಾಗಿ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಸೈಕಲ್ನಲ್ಲಿ ಮನೆಗೆ ಬರುವಾಗ ಪರ್ಸ್ ಕಳೆದುಕೊಂಡಿದ್ದೆ ಎಂದು ಮಹಿಳೆ ಹೇಳಿದ್ದಾರೆ.
ಗುರುವಾರ ಬೆಳಗ್ಗೆ ರಫೀಕ್ ಖಾನ್ ಅವರು ಸ್ನೇಹಿತ ಟಿ.ನಾಗರಾಜ್ ಅವರು ಸಂಪೂರ್ಣ ಹಣ ಇದ್ದ ಪರ್ಸ್ನ್ನು ಜಯನಗರದ ಧನಲಕ್ಷ್ಮಿ ಅವರ ಮನೆಗೆ ತೆರಳಿ ಅವರ ಕೈಗೆ ಇಟ್ಟಿದ್ದಾರೆ.
ಇದನ್ನೂ ಓದಿ | ಸಿಟಿ ಬಸ್ಸಲ್ಲಿ ಪರ್ಸ್ ಕಳೆದುಕೊಂಡ ಮಹಿಳೆಗೆ ಕೆಲವೆ ಹೊತ್ತಲ್ಲಿ ಮತ್ತೊಂದು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422