ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಸ್ಮಾರ್ಟ್ ಸಿಟಿ ಯೋಜನೆ ಅಡಿ ಬಾಲರಾಜ್ ಅರಸ್ ರಸ್ತೆಯಲ್ಲಿ ನಿರ್ಮಿಸಿರುವ ಕೇಬಲ್ ಡೆಕ್‌ನ ಸ್ಲ್ಯಾಬ್‌ಗಳು ವಾಹನ ಸವಾರರ ಪಾಲಿಗೆ ಮೃತ್ಯು ಕೂಪವಾಗಿವೆ. ಯಾವುದೇ ಸಂದರ್ಭ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
ಬಾಲರಾಜ್ ಅರಸ್ ರಸ್ತೆಯ ಎರಡು ಬದಿಯಲ್ಲೂ ಕೇಬಲ್ ಡೆಕ್‌ಗಳನ್ನು ನಿರ್ಮಿಸಿ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಭಾರಿ ವಾಹನಗಳು ನಿರಂತರವಾಗಿ ಸಂಚರಿಸುತ್ತವೆ. ಹಾಗಾಗಿ ಸ್ಲ್ಯಾಬ್‌ಗಳು ಪದೇ ಪದೆ ಅಂಕು ಡೊಂಡಾಗುತ್ತಿವೆ. ಇದನ್ನು ಗಮನಿಸಿ ಸವಾರರು ಸ್ಲ್ಯಾಬ್ ಮೇಲೆ ವಾಹನ ಹತ್ತುವುದನ್ನು ತಪ್ಪಿಸಲು ಹೋಗಿ ಹಿಂದೆ ಅಥವಾ ಮುಂದೆ ಸಾಗುತ್ತಿರುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ.
ದ್ವಿಚಕ್ರ ವಾಹನಗಳು ವೇಗವಾಗಿ ಬಂದು ಅಪಾಯಕಾರಿ ಸ್ಥಿತಿಯಲ್ಲಿರುವ ಸ್ಲ್ಯಾಬ್‌ಗಳ ಮೇಲೆ ಹತ್ತಿಸಿದರೆ ಅಪಘಾತ ನಿಶ್ಚಿತ. ಬೈಕ್ ಸವಾರರು ಗಂಭೀರವಾಗಿ ಗಾಯಗೊಳ್ಳುವ ಅಥವಾ ಪ್ರಾಣಪಾಯ ಸಂಭವಿಸುವ ಸಾಧ್ಯತೆ ಇದೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣ ಎದುರು 100 ಅಡಿ ರಸ್ತೆಯಲ್ಲಿ ಹಂಪ್‌ಗಳಿಂದಲೆ ಅಪಘಾತ, ಹೇಗದು?