SHIVAMOGGA LIVE NEWS | 9 AUGUST 2023
SHIMOGA : ಕೇಂದ್ರ ಸರ್ಕಾರ ಅಡಿಕೆ (Adike) ಆಮದು (Import) ನೀತಿಯನ್ನು ಈ ಕೂಡಲೆ ಹಿಂಪಡೆಯಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.
![]() |
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರತಿವರ್ಷ 17 ಸಾವಿರ ಟನ್ ಅಡಿಕೆಯನ್ನು ಭೂತಾನ್‌ನಿಂದ (Bhutan) ಅಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಇದರಿಂದ ಸಾವಿರಾರು ಅಡಿಕೆ ಬೆಳೆಗಾರರ ಬದುಕುವ ಹಕ್ಕನ್ನು ಕಸಿದಿದೆ ಎಂದರು.
ಆರಗ ಜ್ಞಾನೇಂದ್ರ ಅವರು ಅಡಿಕೆ ಕಾರ್ಯಪಡೆ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರನ್ನು ಟೀಕಿಸುವ ಚಿಲ್ಲರೆ ರಾಜಕಾರಣ ಮಾಡುವ ಬದಲು ಅಡಿಕೆ ಬೆಳೆಗಾರರ ರಕ್ಷಣೆಗೆ ಧ್ವನಿ ಎತ್ತಬೇಕಿದೆ ಎಂದು ಕಲ್ಲೂರು ಮೇಘರಾಜ್ ಆಗ್ರಹಿಸಿದರು.
ಇದನ್ನೂ ಓದಿ- ಅಡಿಕೆ ರೇಟ್ | 8 ಆಗಸ್ಟ್ 2023 | ಯಾವ್ಯಾವ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?
ಹಲವರು ಹೆಚ್ಚಿಗೆ ದರಕ್ಕೆ ಖೇಣಿಯನ್ನು ಒಪ್ಪಿಕೊಂಡು ಬೆಳೆಗಾರರಿಗೆ ಮುಂಗಡವಾಗಿ ಪಾವತಿ ಮಾಡಿದ್ದಾರೆ. ಜತೆಗೆ ಇತರ ರಾಜ್ಯಗಳಲ್ಲೂ ಅಡಿಕೆ ಕಟಾವು ಪ್ರಾರಂಭವಾಗಿದೆ. ಹೀಗಿರುವಾಗ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸೂಕ್ತವಲ್ಲ. ಆದ್ದರಿಂದ ಈ ಕೂಡಲೆ ಕೇಂದ್ರ ಈ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಪಿಎಲ್ ಕುಟುಂಬಗಳಿಗೆ ಅಂತ್ಯ ಸಂಸ್ಕಾರ ಯೋಜನೆಯಡಿ ನೀಡುತ್ತಿದ್ದ 5 ಸಾವಿರ ರೂ. ನೆರವನ್ನು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರದ್ದು ಮಾಡಿದ್ದರು. ಇದನ್ನು ಸಿದ್ದರಾಮಯ್ಯ ಸರಕಾರ ಪುನಃ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಂ.ಸಂಗಯ್ಯ, ಡಾ.ಕಲ್ಹನ, ಎಸ್.ಟಿ.ಪುಷ್ಪವತಿ, ಮಂಜುಳಾ ಶಂಕರನಾಯ್ಕ ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200