ಶಿವಮೊಗ್ಗದಲ್ಲೂ ಇದ್ದಾರಾ ಪಾಕಿಸ್ತಾನಿಯರು?, ‘ಪಾಕ್‌ ಪ್ರಜೆಗಳನ್ನು ಹೊರಗಟ್ಟಲು ಕಾಂಗ್ರೆಸ್‌ ಉದಾಸೀನʼ, ಸಂಸದ ಬೇಸರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಪಾಕಿಸ್ತಾನದ (Pakistan) ಪ್ರಜೆಗಳು ಇನ್ನೂ ರಾಜ್ಯದ ಅಲ್ಲಲ್ಲಿ ಇರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಉದಾಸೀನ ಮಾಡದೆ ಇಂತಹವರನ್ನು ಪತ್ತೆ ಮಾಡಿ 24 ಗಂಟೆಯೊಳಗೆ ಅವರನ್ನು ಅವರ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.

The-Team-PU-College-scaled

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಪೆಹಲ್ಗಾಮ್‌ ದಾಳಿ ಬೆನ್ನಿಗೆ ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳು 48 ಗಂಟೆಯೊಳಗೆ ದೇಶ ತೊರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ ಸೂಚನೆ ನೀಡಿದ್ದರು. ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯದಿಂದಲು ಪಾಕಿಸ್ತಾನದ ಪ್ರಜೆಗಳನ್ನು ಹೊರಗೆ ಕಳುಹಿಸಲಾಗುತ್ತಿದೆ. ಆದರೆ ಕರ್ನಾಟಕ ಸೇರಿ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಿ ಹಿಂದಕ್ಕೆ ಕಳುಹಿಸಲು ಉದಾಸೀನ ತೋರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಂಸದ ರಾಘವೇಂದ್ರ ಹೇಳಿದ ಪ್ರಮುಖಾಂಶ

Point 1 F1F1F1ಪಾಕಿಸ್ತಾನದ ಕೆಲವು ಪ್ರಜೆಗಳು ಕರ್ನಾಟಕದಲ್ಲಿ ಅಲ್ಲಲ್ಲಿ ಇನ್ನೂ ಓಡಾಡುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ಇದೆ.

Point 2 F1F1F1ನಮ್ಮ ಜಿಲ್ಲೆಯಲ್ಲಿರುವ ಪಾಕಿಸ್ತಾನಿ ನಿವಾಸಿಗಳನ್ನು ಪತ್ತೆ ಹಚ್ಚಿ ತಕ್ಷಣದ ಅವರ ದೇಶಕ್ಕೆ ಕಳುಹಿಸಲು ಪ್ರಯತ್ನ ಮಾಡಬೇಕು.

BY-Raghavendra-Press-Meet

Point 3 F1F1F1ಇಂತಹವರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಅವರ ದೇಶಕ್ಕೆ ಕಳುಹಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

Point 4 F1F1F1ವಿವಿಧ ಪ್ರಕೋಷ್ಠಗಳು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿವೆ. ಮೇ 7ರಂದು ರಾಜ್ಯಪಾಲರಿಗೆ ಇದನ್ನು ರವಾನಿಸಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್‌.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್‌ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿ ಸಾಮೂಹಿಕವಾಗಿ ಸಾವಿರ ಜನರಿಂದ ವಚನ ಗಾಯನ, ಹೇಗಿರುತ್ತೆ ಕಾರ್ಯಕ್ರಮ?

Arya-PU-College-Shimoga.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment