ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 MAY 2024
ELECTION NEWS : ಇಲ್ಲಿ ಮತದಾರನೆ ಪ್ರಭು. ರಾಜ ಪೋಷಾಕಿನಲ್ಲಿ ಮಿಂಚುತ್ತಿದ್ದಾರೆ ಚುನಾವಣ ಅಧಿಕಾರಿಗಳು. ಇದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ಥಾಪಿಸಲಾಗಿರುವ ವಿಶೇಷ ಮತಗಟ್ಟೆಯ ರಮಣೀಯ ದೃಶ್ಯ.
ಅರಮನೆ ಮಾದರಿಯಲ್ಲಿ ಮತಗಟ್ಟೆಯನ್ನು ಅಲಂಕೃತಗೊಳಿಸಲಾಗಿದೆ. ಚುನಾವಣ ಸಿಬ್ಬಂದಿ ರಾಜ ಪೋಷಾಕಿನಲ್ಲಿ ಗಮನ ಸೆಳೆಯುತ್ತಿದ್ದಾರೆ. ಇಬ್ಬರು ಪುರುಷ, ಮೂವರು ಮಹಿಳಾ ಸಿಬ್ಬಂದಿ ವಿಭಿನ್ನವಾಗಿ ರೆಡಿಯಾಗಿದ್ದಾರೆ.
ಇನ್ನು, ಮತ ಚಲಾಯಿಸಿ ಹೊರ ಬಂದವರು ಫೋಟೊ ಕ್ಲಿಕ್ಕಿಸಲು ಫೋಟೊ ಜೋನ್ ಸ್ಥಾಪಿಸಲಾಗಿದೆ. ಮತದಾರರು ಸಿಂಹಾಸನದ ಮೇಲೆ ಕುಳಿತು ಕಿರೀಟ ಧರಿಸಿ, ಶಾಯಿ ಹಚ್ಚಿಸಿಕೊಂಡ ಬೆರಳು ತೋರಿಸಿ ಫೋಟೊಗೆ ಪೋಸ್ ನೀಡಬಹುದು. ಹಿಂಭಾಗದಲ್ಲಿ ರಾಜನ ಅಸ್ಥಾನ ಹೋಲುವ ಚಿತ್ರವಿದೆ. ಅದರ ಮೇಲೆ ಮತದಾರ ಪ್ರಭು ಎಂದು ಬರೆಯಲಾಗಿದೆ. ಬೆಳಗ್ಗೆಯಿಂದ ಇಲ್ಲಿ ಹಲವರು ಮತ ಚಲಾಯಿಸಿ, ಸಿಂಹಾಸನವೇರಿ ಖುಷಿ ಪಟ್ಟಿದ್ದಾರೆ.



ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತದಾನ ಆರಂಭ, ಬೆಳಗ್ಗೆಯಿಂದಲೇ ಮತದಾರರಲ್ಲಿ ಉತ್ಸಾಹ, ಅಲ್ಲಲ್ಲಿ ತಾಂತ್ರಿಕ ದೋಷ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






