ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 1 AUGUST 2023
SHIMOGA : ತಮ್ಮ ಆಪ್ತ ಶಾಖೆಯ ನೌಕರೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್ ವಿಭಿನ್ನವಾಗಿ ಬೀಳ್ಕೊಡುಗೆ (send off) ನೀಡಿದ್ದಾರೆ. ನಿವೃತ್ತ ನೌಕರನಿಗೆ ತಾವೇ ಖುದ್ದು ಸಿಹಿ ಊಟ ಬಡಿಸಿ ಮಾದರಿಯಾಗಿದ್ದಾರೆ.

ಪಾಲಿಕೆ ಕಮಿಷನರ್ ಆಪ್ತ ಶಾಖೆ ನೌಕರ ಕರಿಯಣ್ಣ ಜು.31ರಂದು ನಿವೃತ್ತರಾದರು. ಕಮಿಷನರ್ ಮಾಯಣ್ಣಗೌಡ ಅವರಿಗೆ ಕರಿಯಣ್ಣ ಅವರು ಪ್ರತಿ ದಿನ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರು.
ಸಿಹಿ ಊಟ ತರಿಸಿ ಬಡಿಸಿದರು
ಜು.31ರ ಮಧ್ಯಾಹ್ನ ಕಮಿಷನರ್ ಮಾಯಣ್ಣಗೌಡ ಅವರು ಕರಿಯಣ್ಣ ಅವರಿಗಾಗಿ ಸಿಹಿ ಊಟ ತರಿಸಿದರು. ಊಟಕ್ಕೆ ಬರುವಂತೆ ಕರೆದು ಅಪ್ಪುಗೆ ನೀಡಿ, ತಾವು ಕೂರುತ್ತಿದ್ದ ಜಾಗದಲ್ಲಿ ಕರಿಯಣ್ಣ ಅವರನ್ನು ಕೂರಿಸಿ, ಕಮಿಷನರ್ ಅವರೆ ಊಟ ಬಡಿಸಿದರು. ಇನ್ನಷ್ಟು ಊಟ ಮಾಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ – ಬೀಳ್ಕೊಡುಗೆ ಬಳಿಕ ಕಚೇರಿಯಿಂದ ಹೊರ ಬಂದ ನೌಕರನಿಗೆ ಕಾದಿತ್ತು ಅಚ್ಚರಿ, ಮಾದರಿಯಾದರು ಹಿರಿಯ ಅಧಿಕಾರಿ
ಕರಿಯಣ್ಣ ಅವರ ವೃತ್ತಿ ಜೀವನದ ಕೊನೆಯ ದಿನವನ್ನು ಕಮಿಷನರ್ ಮಾಯಣ್ಣಗೌಡ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದರು. ಕಮಿಷನರ್ ನಡೆಗೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.jpeg)
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





