ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 APRIL 2023
SHIMOGA : ನಿವೃತ್ತ ಅರಣ್ಯಾಧಿಕಾರಿ ಮತ್ತು ಶಿವಮೊಗ್ಗದ ಹಿಂದಿನ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ನಡೆಸಿ ಆದಾಯಕ್ಕು ಮೀರಿದ ಆಸ್ತಿ ಪತ್ತೆ ಹಚ್ಚಿದ್ದಾರೆ. ಏ.24ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಶಿವಮೊಗ್ಗದ ಯಾವ್ಯಾವ ಅಧಿಕಾರಿ ಬಳಿ ಏನೇನು ಸಿಕ್ಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಐ.ಎಂ.ನಾಗರಾಜ್, ನಿವೃತ್ತ ಡಿಸಿಎಫ್
ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಆಗಿ ನಿವೃತ್ತರಾಗಿರುವ ಐ.ಎಂ.ನಾಗರಾಜ್ ಅವರಿಗೆ ಸಂಬಂಧಿಸಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayuktha Raid) ನಡೆಸಿ, ದಾಖಲೆಗಳನ್ನು ಪತ್ತೆ ಹಚ್ಚಿದ್ದಾರೆ.
ಹೊನ್ನಾಳಿಯಲ್ಲಿ ಒಂದು ಮನೆ, ಶಿವಮೊಗ್ಗ ಲಗಾನ್ ಕಲ್ಯಾಣ ಮಂಟಪ ಬಳಿ ಒಂದು ಮನೆ ಮತ್ತು ಮಳಿಗೆ, 4 ಕಾಂಪ್ಲೆಕ್ಸ್, ಬೆಂಗಳೂರಿನ ಕಗ್ಗಲಿಪುರದಲ್ಲಿ 1 ಫ್ಲಾಟ್, ಶಿವಮೊಗ್ಗದ ಅನುಪಿನಕಟ್ಟೆ ಬಳಿ 1 ಫಾರ್ಮ್ ಹೌಸ್, 10 ಎಕರೆ ಅಡಕೆ ತೋಟ, ಶಿವಮೊಗ್ಗದ ಸಾಗರ ರಸ್ತೆಯಲ್ಲಿ ದುರ್ಗಾಂಬ ಸರ್ವಿಸ್ ಸ್ಟೇಷನ್, ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿ ಶ್ರೀದೇವಿ ಸರ್ವಿಸ್ ಸ್ಟೇಷನ್, ಅಟಲ್ ಬಿಹಾರಿ ವಾಜಪೇಯ ಬಡಾವಣೆಯಲ್ಲಿ 2 ಸೈಟ್, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 1 ಫ್ಲಾಟ್, ಮಂಡ್ಲಿ ಕಲ್ಲೂರು ಕೈಗಾರಿಕಾ ಪ್ರದೇಶದಲ್ಲಿ 3 ಫ್ಲಾಟ್, ಶ್ರೀರಾಂಪುರದಲ್ಲಿ 2 ಸೈಟ್, 4 ನಾಲ್ಕು ಚಕ್ರದ ವಾಹನಗಳು, 1 ದ್ವಿಚಕ್ರ ವಾಹನ, 16.04 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ಎನ್.ಜೆ.ನಾಗರಾಜ್, ಶಿವಮೊಗ್ಗದ ಹಿಂದಿನ ತಹಶೀಲ್ದಾರ್
ಶಿವಮೊಗ್ಗದ ಹಿಂದಿನ ತಹಶೀಲ್ದಾರ್ ಎನ್.ಜೆ.ನಾಗರಾಜ್ ಅವರು ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ – ಭದ್ರಾ ಜಲಾಶಯದಿಂದ ಏ.27ರಿಂದ ಪ್ರತಿದಿನ ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಎಷ್ಟು ದಿನ? ಕಾರಣವೇನು?
ನಾಗರಾಜ್ ಅವರ ಬಳಿ ಶಿಕಾರಿಪುರದ ಚನ್ನಕೇಶವ ನಗರದಲ್ಲಿ 1 ಮನೆ, ಚನ್ನಗಿರಿಯ ನಿಂಬಾಪುರದಲ್ಲಿ 1 ಮನೆ, 244 ಗ್ರಾಂ ಚಿನ್ನಾಭರಣ, 533 ಗ್ರಾಂ ಬೆಳ್ಳಿ ವಸ್ತುಗಳು, 1 ಕಾರು, 1 ದ್ವಿಚಕ್ರ ವಾಹನ, ನಾಗರಾಜ್ ಮತ್ತು ಅವರ ಕುಟುಂಬದವರಿಗೆ ಸಂಬಂಧಿಸಿದ ಸ್ಥಿರಾಸ್ತಿ ಪತ್ರಗಳು, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.