ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020
ಬೆಂಗಳೂರಿನ ಪಾದರಾಯನಪುರದ ಕರೋನ ಅಟ್ಟಹಾಸ ಶಿವಮೊಗ್ಗಕ್ಕೂ ಹಬ್ಬಿದೆ. ಅಲ್ಲಿ ಕರ್ತವ್ಯ ನಿರ್ವಹಿಸಿ ಶಿವಮೊಗ್ಗಕ್ಕೆ ಹಿಂತಿರುಗಿದ ಪೊಲೀಸರಿಗೆ ಈಗ ಕರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಹನ್ನೊಂದು ಪೊಲೀಸರನ್ನು ಈಗ ಕ್ವಾರಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ KSRP ಬಟಾಲಿಯನ್ನ 22 ಸಿಬ್ಬಂದಿಗಳು ಬೆಂಗಳೂರಿನ ಪಾದರಾಯನಪುರ ಮತ್ತು ಶಿವಾಜಿನಗರದಲ್ಲಿ ಬಂದೋಬಸ್ತ್ ಡ್ಯೂಟಿ ಮಾಡಿದ್ದರು. ನಾಲ್ಕು ದಿನದ ಹಿಂದಷ್ಟೇ ಇವರೆಲ್ಲ ಶಿವಮೊಗ್ಗಕ್ಕೆ ಹಿಂತಿರುಗಿದ್ದರು. ಎಲ್ಲರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಶನಿವಾರ ಮೂವರಲ್ಲಿ ಸೋಂಕು ದೃಢವಾಗಿತ್ತು.
ಮತ್ತೆ ಎಂಟು ಮಂದಿಗೆ ಪಾಸಿಟಿವ್
ಸೋಮವಾರದ ವರದಿಯಲ್ಲಿ KSRPಯ ಎಂಟು ಪೊಲೀಸರಿಗೆ ಕರೋನ ಪಾಸಿಟವ್ ಬಂದಿದೆ. ಇದರಿಂದ ಹನ್ನೊಂದು ಪೊಲೀಸರಿಗೆ ಕರೋನ ಪಾಸಿಟಿವ್ ಬಂದಂತಾಗಿದೆ. ಉಳಿದ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇವರ ತಪಾಸಣೆ ನಡೆಯುತ್ತಿದೆ.
ಪಿಎಸ್ಐಗೆ ಕರೋನ ಬಂದಿಲ್ಲ
ಇತ್ತ ಕೆಲವು ಮಾಧ್ಯಮಗಳಲ್ಲಿ KSRP ಶಿವಮೊಗ್ಗ ಬೆಟಾಲಿಯನ್ ಪಿಎಸ್ಐ ಅವರಿಗೆ ಕರೋನ ಬಂದಿದೆ ಎಂದು ವರದಿಯಾಗಿದೆ. ಇದರಿಂದ ಪಿಎಸ್ಐ ಅವರ ಕುಟುಂಬ ಆತಂಕಕ್ಕೀಡಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಪಿಎಸ್ಐ ತಮ್ಮನ್ನು ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದಾರೆ. ತಮಗೆ ಕರೋನ ಬಂದಿದೆ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಸುಳ್ಳು ಎಂದು ತಿಳಿಸಿದ್ದಾರೆ.
ಜಯನಗರ ಠಾಣೆಗೂ ತಟ್ಟಿದ ಬಿಸಿ
ಸೋಂಕಿತ KSRP ಸಿಬ್ಬಂದಿಯೊಂದಿಗೆ ಪ್ರಾಥಮಿಕ ಸಂಪರ್ಕದ್ದ ಮಹಿಳಾ ಕಾನ್ಸ್ಟೇಬಲ್ (ಸೋಂಕಿತ ಸಿಬ್ಬಂದಿಯ ಪುತ್ರಿ) ಜಯನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಜಯನಗರ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422