ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 AUGUST 2023
SHIMOGA : ಎಂಟೂವರೆ ವರ್ಷದ ಪೋರ ಇವತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ (INSPECTOR) ಆಗಿ ಅಧಿಕಾರ ಸ್ವೀಕರಿಸಿದ. ಬಳಿಕ ಕರ್ತವ್ಯದ ಕುರಿತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದ. ಕಳ್ಳನಿಗೆ ಬುದ್ದಿವಾದ ಹೇಳಿ, ಸರಿ ದಾರಿಯಲ್ಲಿ ನಡೆಯುವಂತೆ ವಾರ್ನಿಂಗ್ (Warning) ನೀಡಿದ..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಸೂಳೆಬೈಲು ನಿವಾಸಿ ತಬ್ರೇಜ್ ಖಾನ್ ಅವರ ಪುತ್ರ ಒಂದನೆ ತರಗತಿಯ ಆಜಾನ್ ಖಾನ್ ಇವತ್ತು ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಒಂದು ಗಂಟೆ ಜವಾಬ್ದಾರಿ ನಿಭಾಯಿಸಿದ. ಈ ವಿಶೇಷ ಸಂದರ್ಭಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಾಕ್ಷಿಯಾಯಿತು.
ಪೋರನಿಗೆ ಇನ್ಸ್ಪೆಕ್ಟರ್ ಜವಾಬ್ದಾರಿ
ಆಜಾನ್ ಖಾನ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಅನ್ನವುದು ಆತನ ಆಸೆ. ಇದೇ ಕಾರಣಕ್ಕೆ ಪೋಷಕರು ಮಗನ ಆಸೆ ಈಡೇರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೊಲೀಸ್ ಇಲಾಖೆ ವತಿಯಿಂದ ಆಜಾನ್ ಖಾನ್ನನ್ನು ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ (INSPECTOR) ಆಗಿ ನಿಯೋಜಿಸಲಾಗಿತ್ತು.
ಸಲ್ಯೂಟ್ ಹೊಡೆದು ಅಧಿಕಾರ ಸ್ವೀಕಾರ
ಬಾಲಕನ ಆಸೆ ಈಡೇರಿಸಲು ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿತ್ತು. ಪೊಲೀಸ್ ಜೀಪಿನಲ್ಲಿಯೇ ಆಜಾನ್ ಖಾನ್ನನ್ನು ಠಾಣೆಗೆ ಕರೆತರಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ ಭೂಮರೆಡ್ಡಿ, ಇನ್ಸ್ಪೆಕ್ಟರ್ ಆಜಾನ್ ಖಾನ್ನನ್ನು ಸ್ವಾಗತಿಸಿದರು. ಹಿರಿಯ ಅಧಿಕಾರಿಗಳಿಗೆ ಸಲ್ಯೂಟ್ ಮಾಡಿದ ಆಜಾನ್ ಖಾನ್ ಇನ್ಸ್ಪೆಕ್ಟರ್ (INSPECTOR) ಆಗಿ ಅಧಿಕಾರ ಸ್ವೀಕರಿಸಿದ.
ಇದನ್ನೂ ಓದಿ – ಮಹಿಳೆಯರಿಗೆ 2 ಸಾವಿರ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ, ಶಿವಮೊಗ್ಗದಲ್ಲಿ ಅಧಿಕಾರಿಗಳಿಗೆ ಡಿಸಿ 3 ಸೂಚನೆ
ಸಿಬ್ಬಂದಿ ಸಮಸ್ಯೆ ಆಲಿಸಿದ, ಕಳ್ಳನಿಗೆ ವಾರ್ನಿಂಗ್ ನೀಡಿದ
ಅಧಿಕಾರ ಸ್ವೀಕರಿಸುತ್ತಿದ್ದಂತೆ ಇನ್ಸ್ಪೆಕ್ಟರ್ ಆಜಾನ್ ಖಾನ್, ಸಿಬ್ಬಂದಿಗಳನ್ನು ಕರೆದು ಸಮಸ್ಯೆ ಆಲಿಸಿದ. ‘ಎಲ್ಲರು ಚನ್ನಾಗಿ ಕೆಲಸ ಮಾಡಬೇಕುʼ ಎಂದು ಸೂಚನೆ ನೀಡಿದ. ಸಿಬ್ಬಂದಿಯೊಬ್ಬರು ರಜೆ ಬೇಕು ಎಂದು ಮನವಿ ಮಾಡಿದರು. ಕಾರಣ ಕೇಳಿದ ಆಜಾನ್ ಖಾನ್, ರಜೆಗೆ ಅನುಮತಿ ನೀಡಿದ. ಇನ್ನು, ಇದೇ ವೇಳೆ ಪೊಲೀಸರು ಕಳ್ಳನನ್ನು ಹಿಡಿದು ತಂದು ನಿಲ್ಲಿಸಿದಾಗ, ‘ಇನ್ಮುಂದೆ ಕಳ್ಳತನ ಮಾಡಬಾರದು’ ಎಂದು ವಾರ್ನಿಂಗ್ ನೀಡಿದ.
ಯಾರೆಲ್ಲ ಏನೇನು ಹೇಳಿದರು?
ಸಂಜೆ 6.30ರಿಂದ ಒಂದು ಗಂಟೆ ಕಾಲ ಆಜಾನ್ ಖಾನ್ ದೊಡ್ಡಪೇಟೆ ಠಾನೆ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿಭಾಯಿಸಿದ. ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಕ್ಕೆ ಬಾಲಕ ಖುಷಿ ಪಟ್ಟ. ಮಗನ ಆಸೆ ಈಡೇರಿಸಿದ ಸಮಾಧಾನ ಪೋಷಕರಲ್ಲಿತ್ತು. ವಿಶೇಷ ಸಂದರ್ಭಕ್ಕೆ ಜೊತೆಯಾದ ಧನ್ಯತೆ ಪೊಲೀಸರಲ್ಲಿತ್ತು.