ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಅಕ್ಟೋಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದಸರಾ ವಿಚಾರದಲ್ಲಿ ಮಹಾನಗರ ಪಾಲಿಕೆ ಮತ್ತೊಂದು ಎಡವಟ್ಟು ಮಾಡಿದೆ. ದಸರಾ ಮೆರವಣಿಗೆಗೆ ಆಗಮಿಸಿದ್ದ ಸಕ್ರೆಬೈಲು ಬಿಡಾರದ ಆನೆಗಳಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಅಗೌರವ ತೋರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಕ್ರೆಬೈಲು ಬಿಡಾರದ ಸಾಗರ ಮತ್ತು ಭಾನುಮತಿ ಆನೆಗಳಿಗೆ ಅಗೌರವ ತೋರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದಸರಾ ಮೆರವಣಿಗೆಯಲ್ಲಿ ಇವರೆಡೂ ಆನೆಗಳು ಸ್ವಲ್ಪ ದೂರ ಹೆಜ್ಜೆ ಹಾಕಿದ್ದವು. ಬಳಿಕ ಹಿಂತಿರುಗಿದ್ದವು.
ಇದನ್ನು ಓದಿ | ಶಿವಮೊಗ್ಗ ಜಂಬೂ ಸವಾರಿಗೆ ಎರಡೇ ಆನೆ, ತಾಲೀಮು ಇಲ್ಲದೆ ಅಖಾಡಕ್ಕೆ ಇಳಿಸುತ್ತಿದೆ ಪಾಲಿಕೆ
ಆ ದಿನ ಮಧ್ಯಾಹ್ನವೇ ಆನೆಗಳು ಬಿಡಾರಕ್ಕೆ ಮರಳಿವೆ. ಶಿವಮೊಗ್ಗದಿಂದ ಸಕ್ರೆಬೈಲು ಬಿಡಾರದವರೆಗೂ ಆನೆಗಳು ನಡೆದುಕೊಂಡೇ ಹೋಗಿವೆ. ದಸರಾ ಹಿನ್ನೆಲೆ ಆನೆಗಳಿಗೆ ಹಚ್ಚಲಾಗಿದ್ದ ಬಣ್ಣವು ಹಾಗೆ ಇತ್ತು. ಆನೆಗಳು ನಡೆದು ಹೋಗುತ್ತಿರುವ ದೃಶ್ಯವನ್ನು ಪರಿಸರವಾದಿಗಳ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿ ಭಾರಿ ಶಿವಮೊಗ್ಗ ದಸರಾದ ಅಂಬಾರಿ ಹೊರಲು ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ಕರೆಸಲಾಗುತ್ತದೆ. ಜಂಬೂ ಸವಾರಿ ಮರುದಿನ ಮಾವುತ, ಕಾವಾಡಿ, ಬಿಡಾರದ ಅಧಿಕಾರಿಗಳಿಗೆ ಗೌರವ ಸಲ್ಲಿಸಿ, ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಗುತಿತ್ತು. ಆದರೆ ಈ ಭಾರಿ ಅಂತಹ ಪರಿಪಾಠವಿಲ್ಲದಾಗಿದೆ.
ಆನೆಗಳನ್ನು ಲಾರಿಯಲ್ಲಿ ಕರೆಸಿ, ಲಾರಿ ಮೂಲಕವೇ ಕಳುಹಿಸಲಾಗುತಿತ್ತು. ಆದರೆ ಈ ಭಾರಿ ಹವೇ ರಸ್ತೆಯಲ್ಲಿ ಆನೆಗಳು ನಡೆದುಕೊಂಡೇ ಬಂದು, ನಡೆದುಕೊಂಡೇ ಬಿಡಾರಕ್ಕೆ ಮರಳಿವೆ. ಆನೆಗಳಿಗೆ ಯಾವುದೆ ರಕ್ಷಣೆ ಒದಗಿಸದೆ ಹೈವೇ ರಸ್ತೆಯಲ್ಲಿ ಕಳುಹಿಸಲಾಗಿದೆ. ಇದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪಾಲಿಕೆ ಮತ್ತು ಅರಣ್ಯ ಇಲಾಖೆ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Yeedella paper nalli mathra odalu avaru yene thappu madidaru adu thappe alla yakendare pranigalighe novadare yaru keluvavaru nachike getta namma municipality