ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 ಏಪ್ರಿಲ್ 2022
ನ್ಯಾಯಾಲಯದ ತೀರ್ಪನ್ನು ಎಲ್ಲಾ ಧರ್ಮಿಯರು ಪಾಲನೆ ಮಾಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಮುಸ್ಲಿಮರನ್ನು ತೃಪ್ತಿಪಡಿಸುವ ಕಾರಣಕ್ಕಾಗಿ ಸಂವಿಧಾನ ಮೀರಿ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದನ್ನು ಮೀರುತ್ತಿರುವುದು ಏಕೆ. ದೇವಸ್ಥಾನ, ಚರ್ಚುಗಳಲ್ಲಿ ಯಾರಿಗೂ ತೊಂದರೆ ಆಗದ ಹಾಗೆ ಪೂಜೆ ನಡೆಯುತ್ತೆ. ನೀವು ಹಾಗೆ ಮಾಡಿ ಎಂದರು.
ಯಾವಾಗಲೂ ಕೋರ್ಟನ್ನೆ ಪ್ರಸ್ತಾಪಿಸುತ್ತೀರ
ಇನ್ನು, ನಮ್ಮ ದೇಶದಲ್ಲಿ ನ್ಯಾಯಾಲಯ, ಸಂವಿಧಾನವಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಮುಸಲ್ಮಾರನ್ನು ತೃಪ್ತಿಪಡಿಸಲು ಸಂವಿಧಾನವನ್ನು ಮೀರಿ ಮಾತನಾಡುತ್ತಿದ್ದಾರೆ. ಪ್ರತಿ ವಿಚಾರಕ್ಕೂ ನ್ಯಾಯಾಲಯವನ್ನು ಪ್ರಸ್ತಾಪಿಸುವವರು ಈಗೇಕೆ ಕೋರ್ಟ್ ಆದೇಶವನ್ನು ಮೀರಿ ಮಾತನಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪನ್ನು ಪಾಲಿಸುಂತೆ ಮುಸಲ್ಮಾನರಿಗೆ ತಿಳಿಸಬಹುದಲ್ಲವೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವುದರಿಂದ ವಿದ್ಯಾರ್ಥಿಗಳು, ರೋಗಿಗಳು, ವೃದ್ಧರಿಗೆ ತೊಂದರೆ ಆಗುತ್ತದೆ. ಈ ವಿಚಾರ ನಿಮ್ಮ ಬಾಯಲ್ಲಿ ಸ್ಪಷ್ಟವಾಗಿ ಬರುತ್ತಿಲ್ಲ. ಓಟಿನ ರಾಜಕಾರಣಕ್ಕಾಗಿ ನೀವು ಈ ರೀತಿ ಮಾಡುತ್ತಿದ್ದೀರ. ಇದೆ ಕಾರಣಕ್ಕೆ ರಾಜ್ಯ ಮತ್ತು ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಟೀಕಿಸಿದರು.
ಹಿಜಾಬ್ ವಿಚಾರದಲ್ಲೂ ಹೀಗೆ ಮಾಡಿದರು
ಇನ್ನು, ಹಿಜಾಬ್ ವಿಚಾರವಾಗಿ ಕೋರ್ಟ್ ತೀರ್ಪು ನೀಡದ ಬಳಿಕ ಎಸ್.ಡಿ.ಪಿ.ಐ, ಪಿಎಫ್ಐ ಸಂಘಟನೆಗಳು ಬಂದ್’ಗೆ ಕರೆ ನೀಡಿದವು. ಬಂದ್ ಮಾಡುವುದರ ಅರ್ಥವೇನು. ಅದಕ್ಕೂ ಸಿದ್ದರಾಮಯ್ಯ ಅವರು ಬೆಂಬಲ ನೀಡಿದರು. ಶಾಂತಿಯುತವಾಗಿ ಬಂದ್ ಮಾಡಿ, ಮೆರವಣಿಗೆ ಮಾಡಿದರೆ ತಪ್ಪೇನು ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಇದು ಮುಸಲ್ಮಾನರಿಗೆ ಕೊಡುತ್ತಿರುವ ಕುಮ್ಮಕ್ಕು ಎಂದು ಈಶ್ವರಪ್ಪ ಆರೋಪಿಸಿದರು.
ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಸರ್ವ ಧರ್ಮದವರು ಸಂವಿಧಾನ ಬದ್ಧವಾಗಿ ಪೂಜೆ ಮಾಡಿಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಸಲಹೆ ನೀಡಿದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422