ಶಿವಮೊಗ್ಗದಲ್ಲಿ ಸುಧಾ ಮೂರ್ತಿ, ವಿದ್ಯಾರ್ಥಿನಿಯರ ಜೊತೆ ಸಂವಾದ | PHOTO NEWS

Sudha-Murthy-at-Shimoga-Kamala-Nehru-college

SHIVAMOGGA LIVE NEWS | 5 ಏಪ್ರಿಲ್ 2022 ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಮೃತ ಮಹೋತ್ಸವದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮಾಲಿಕೆಯ ಎರಡನೇ ಉಪನ್ಯಾಸ ಕಾರ್ಯಕ್ರಮವು ಇವತ್ತು ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರು ಮಹಿಳಾ ಸಬಲೀಕರಣ ವಿಚಾರವಾಗಿ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸಿದರು. ಕಾರ್ಯಕ್ರಮ ಫೋಟೊ ಗ್ಯಾಲರಿ ಇಲ್ಲಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ … Read more

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರ, ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಹೇಳಿಕೆ

Minister KS Eshwarappa

SHIVAMOGGA LIVE NEWS | 5 ಏಪ್ರಿಲ್ 2022 ನ್ಯಾಯಾಲಯದ ತೀರ್ಪನ್ನು ಎಲ್ಲಾ ಧರ್ಮಿಯರು ಪಾಲನೆ ಮಾಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರು ಮುಸ್ಲಿಮರನ್ನು ತೃಪ್ತಿಪಡಿಸುವ ಕಾರಣಕ್ಕಾಗಿ ಸಂವಿಧಾನ ಮೀರಿ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದನ್ನು ಮೀರುತ್ತಿರುವುದು ಏಕೆ. ದೇವಸ್ಥಾನ, ಚರ್ಚುಗಳಲ್ಲಿ ಯಾರಿಗೂ ತೊಂದರೆ ಆಗದ … Read more

ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ಶಿವಮೊಗ್ಗದ ಕೆಲವು ಕಡೆ ಎರಡು ದಿನ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | 5 ಏಪ್ರಿಲ್ 2022 ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನಲೆ ಶಿವಮೊಗ್ಗ ನಗರದ ಕೆಲವು ಕಡೆ ಎರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ 7 ಮತ್ತು 8 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಗುರುಪುರ, ಪುರಲೆ, ಶಾಂತಮ್ಮ ಲೇಔಟ್, ಚಿಕ್ಕಲ್, ಸಿದ್ದೇಶ್ವರನಗರ, ಹಸೂಡಿ ರಸ್ತೆ, ವೆಂಕಟೇಶನಗರ, ಸುಬ್ಬಯ್ಯ ಆಸ್ಪತ್ರೆ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ … Read more

ಒಂದೂವರೆ ಗಂಟೆ ತಡವಾಗಿ ಬಂದ ಸಚಿವರು, ಅಧಿಕಾರಿಗಳು, ರೊಚ್ಚಿಗೆದ್ದು ಪ್ರತಿಭಟನೆ

Dalit-Organizations-Protest-against-Minister

SHIVAMOGGA LIVE NEWS | 5 ಏಪ್ರಿಲ್ 2022 ಡಾ. ಬಾಬು ಜಗಜೀವನರಾಮ್ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ವೇದಿಕೆ ಮುಂಭಾಗ ಧರಣಿ ನಡೆಸಿದ ಘಟನೆ ನಡೆದಿದೆ. ಶಿವಮೊಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಡಾ. ಬಾಬು ಜಗಜೀವನರಾಮ್ ಅವರ 115ನೇ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿಯೆ ಸಚಿವರು, ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. … Read more

ಸಾಗರ ಚತುಷ್ಪಥ ರಸ್ತೆ ಕಾಮಗಾರಿಗೆ ಗಡುವು ನಿಗದಿ, ಮಂಜೂರಾದ ಹಣವೆಷ್ಟು? ಎಲ್ಲಿಂದ ಶುರುವಾಗುತ್ತೆ ರಸ್ತೆ?

Haratalu-Halappa-about-NH-Road-in-Sagara

SHIVAMOGGA LIVE NEWS | 5 ಏಪ್ರಿಲ್ 2022 ಮುಂದಿನ ಮಾರಿಕಾಂಬಾ ಜಾತ್ರೆ ವೇಳೆಗೆ ಚತುಷ್ಪಥ ರಸ್ತೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು. ಪಟ್ಟಣದ ಬಿ.ಹೆಚ್.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ 206 ಆಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕಾಳಜಿಯಿಂದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಕಾಮಗಾರಿಗೆ 77 ಕೋಟಿ ರೂ. ಮಂಜೂರಾಗಿದೆ. ಆರಂಭದಲ್ಲಿ ತ್ಯಾಗರ್ತಿ ಕ್ರಾಸ್ನಿಂದ ಅಗಲೀಕರಣ … Read more

ಎಎಪಿ ಸೇರ್ಪಡೆ ವದಂತಿ, ಮೌನ ಮುರಿದ ಕಿಮ್ಮನೆ ರತ್ನಾಕರ್, ಮೂರು ಪಾಯಿಂಟ್ ಸ್ಪಷ್ಟನೆ

Kimmane Rathnakar

SHIVAMOGGA LIVE NEWS | 5 ಏಪ್ರಿಲ್ 2022

ಆಮ್ ಆದ್ಮಿ ಪಕ್ಷ ಸೇರ್ಪಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ವಿಚಾರವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮೌನ ಮುರಿದಿದ್ದಾರೆ. ತಾವು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಎಎಪಿ ಸೇರ್ಪಡೆ ವದಂತಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಕಿಮ್ಮನೆ ರತ್ನಾಕರ್ ಅವರು ಹೇಳಿದ್ದೇನು?

Point 1‘ಕಾಂಗ್ರೆಸ್ ಪಕ್ಷ ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆ ಆಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಆಧಾರ ರಹಿತವಾದದ್ದು.’

Read more

ಸುವರ್ಣ ನ್ಯೂಸ್ ಫೇಸ್ ಬುಕ್ ಖಾತೆಯಲ್ಲಿ ಕಮೆಂಟ್, ಸಿ.ಎಂ.ಖಾದರ್ ವಿರುದ್ಧ ಭದ್ರಾವತಿಯಲ್ಲಿ ಕೇಸ್

facebook logo

SHIVAMOGGA LIVE NEWS | 5 ಏಪ್ರಿಲ್ 2022 ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿ ಭದ್ರಾವತಿಯಲ್ಲಿ ಶಾಂತಿ ಕದಡುವ ಯತ್ನ ನಡೆಸಿದ ಆರೋಪ ಸಂಬಂಧ ಸಿ.ಎಂ.ಖಾದರ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಡಿವೇಲು ಎಂಬುವವರು ಸಿ.ಎಂ.ಖಾದರ್ ಅವರ ವಿರುದ್ಧ ಭದ್ರಾವತಿ ಹಳೆ ನಗರ ಠಾಣೆಗೆ ದೂರು ನೀಡಿದ್ದರು. ಸಿ.ಎಂ.ಖಾದರ್ ಕಮೆಂಟ್ ಏನು? ಸುವರ್ಣ ನ್ಯೂಸ್ ಫೇಸ್ ಬುಕ್ ಖಾತೆಯಲ್ಲಿ ಹಲಾಲ್ ಬೇಡ ಎಂಬ ವಿಚಾರ ಸಂಬಂಧ ಹಿಂದೂ ಜನಜಾಗೃತಿ ಸಮಿತಿಯ ಮನವಿ ಕುರಿತು ಸುದ್ದಿ … Read more

ಕುಮದ್ವತಿ ನದಿ ನೀರಿಗೆ ವಿಷ, ಮೀನುಗಳು ಸಾವು

Hosanagara taluk name Graphics

SHIVAMOGGA LIVE NEWS | 5 ಏಪ್ರಿಲ್ 2022 ರಿಪ್ಪನ್ ಪೇಟೆ ಸಮೀಪ ಕುಮದ್ವತಿ ನದಿ ನಿರಿಗೆ ವಿಷ ಬೆರೆಸಲಾಗಿದೆ. ಇದರಿಂದ ನದಿಯಲ್ಲಿನ ಮೀನುಗಳು ಸಾವನ್ನಪ್ಪಿದ್ದು, ನೀರಿನ ಮೇಲೆ ತೇಲುತ್ತಿವೆ. ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ದುಷ್ಕರ್ಮಿಗಳು ಕುಮದ್ವತಿ ನದಿಗೆ ವಿಷ ಬೆರೆಸಿದ್ದಾರೆ. ಮೀನುಗಳು ಸಾವನ್ನಪ್ಪಿವೆ. ಬೇಸಿಗೆ ಆಗಿರುವುದರಿಂದ ನದಿ ನೀರು ಹರಿಯದೆ ತಗ್ಗು, ಗುಂಡಿಗಳಲ್ಲಿ ನಿಂತಿದೆ. ಜಲಚರ ಪ್ರಾಣಿಗಳು ಹೊಂಡಗಳ ನೀರನ್ನು ಆಶ್ರಯಿಸಿ ಜೀವಿಸುತ್ತಿವೆ. ಆದರೆ ಕೆಲವು ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿರುವುದರಿಂದ ಮೀನುಗಳ … Read more

ಆಗುಂಬೆ ಬಳಿ ರೈತನ ಮೇಲೆ ಕಾಡುಕೋಣ ದಾಳಿ

Bison-in-Shimoga-Tyavarekoppa-Simhadhama-Kadu-Kona

SHIVAMOGGA LIVE NEWS | 5 ಏಪ್ರಿಲ್ 2022 ಅಡಕೆ ತೋಟಕ್ಕೆ ನುಗ್ಗಿದ್ದ ಕಾಡುಕೋಣ ಓಡಿಸಲು ಹೋಗಿದ್ದ ರೈತನ ಮೇಲೆ ದಾಳಿಯಾಗಿದೆ. ಗಂಭೀರ ಗಾಯಗೊಂಡಿರುವ ರೈತನನ್ನು ಕೂಡಲೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಕಾಡುಕೋಣ ತಿವಿದು ಅಸಿಮನೆ ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಆರು ಗಂಟೆ ಹೊತ್ತಿಗೆ ರಾಘವೇಂದ್ರ ತಮ್ಮ ಮನೆ ಮುಂದಿರುವ ಅಡಕೆ ತೋಟಕ್ಕೆ ಬಂದಿದ್ದ ಕಾಡುಕೋಣವನ್ನು ಓಡಿಸಲು ಪತ್ನಿ ಜೊತೆ ಹೋಗಿದ್ದರು. ಆ … Read more

ಆಯನೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದವನನ್ನು ಕೆರೆಗೆ ಹಾರಿ ರಕ್ಷಿಸಿದ ಪೊಲೀಸರು

Ayanur Graphics

SHIVAMOGGA LIVE NEWS | 5 ಏಪ್ರಿಲ್ 2022 ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರಹೊನ್ನೆ ಗ್ರಾಮದ ರವಿ (28) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಮದ್ಯ ವ್ಯಸನಿಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಿದ್ದೇಶ್ವರ ದೇವಸ್ಥಾನ ಬಳಿ ಇರುವ ಕೆರೆಗೆ ಹಾರಿದ್ದಾನೆ ಎಂದು ಆರೋಪಿಸಲಾಗಿದೆ.   ರವಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆರೆಗೆ ಹಾರಿ … Read more