ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JUNE 2021
ಮಿಲಿಟರಿ ಕ್ಯಾಂಟೀನ್‍ನಲ್ಲಿ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ. ವಿದ್ಯಾನಗರದಲ್ಲಿರುವ ಮಿಲಿಟರಿ ಕ್ಯಾಂಟೀನ್ ಮುಂದೆ ಇವತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೊಳೆ ಬಸ್ ನಿಲ್ದಾಣ ಬಳಿ ಇರುವ ಮಿಲಿಟರಿ ಕ್ಯಾಂಟೀನ್‍ನಲ್ಲಿ ದಿನಸಿ ಮತ್ತು ಮದ್ಯ ಪೂರೈಕೆ ಸಮರ್ಪಕವಾಗಿಲ್ಲ ಎಂದು ಮಾಜಿ ಸೈನಿಕರು ಆರೋಪಿಸಿದ್ದಾರೆ. ಲಾಕ್ ಡೌನ್ ಇದ್ದ ಕಾರಣ ಎರಡು ತಿಂಗಳು ಯಾವುದ ದಿನಸಿ ಮತ್ತು ಮದ್ಯ ವಿತರಣೆ ಮಾಡಿಲ್ಲ. ಈಗಲೂ ಇವುಗಳನ್ನು ಒದಗಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಮಾಜಿ ಸೈನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 600 ಮಂದಿ ಸಿಎಂಡಿ ಕಾರ್ಡ್ ಹೊಂದಿರುವ ಮಾಜಿ ಸೈನಿಕರಿದ್ದಾರೆ. ಇವತ್ತು ಸುಮಾರು 50ಕ್ಕೂ ಹೆಚ್ಚು ಮಾಜಿ ಸೈನಿಕರು ಕ್ಯಾಂಟೀಗೆ ಬಂದಾಗ ಆಡಳಿತ ಸಿಬ್ಬಂದಿಗಳ ಜೊತೆಗೆ ಮಾತಿನ ಚಕಮಕಿಯಾಗಿದೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200