ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021
ನಿಗೂಢ ಶಬ್ದ, ಭೂಕಂಪನದ ಅನುಭವದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹಬ್ಬಲು ಆರಂಭವಾಗಿದೆ. ಭೂಮಿ ಕಂಪಿಸಿದ ಸಿಸಿಟಿವಿ ವಿಡಿಯೋಗಳು, ರಸ್ತೆಯಲ್ಲಿ ಭಾರಿ ಗಾತ್ರದ ಬಿರುಕು ಸೇರಿದಂತೆ ವಿವಿಧ ಮಾಹಿತಿ ಹರಿದಾಡುತ್ತಿದೆ.
ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಇದರಿಂದ ಜನರ ಆತಂಕ ದ್ವಿಗುಣಗೊಂಡಿದೆ.
ಇದನ್ನೂ ಓದಿ | BREAKING NEWS | ಜಿಲ್ಲೆಯಾದ್ಯಂತ ಸ್ಫೋಟದ ಶಬ್ದ, ಭೂಕಂಪದ ಅನುಭವ, ಮನೆಯಿಂದ ಹೊರ ಬಂದ ಜನ
ಏನೆಲ್ಲ ಸುಳ್ಳು ಸುದ್ದಿ ಹರಿದಾಡ್ತಿದೆ?
ಜೋರಾದ ಭೂಕಂಪ, ಎಲ್ಲವೂ ಅಲುಗಾಡುತ್ತಿರುವ ಸಿಸಿಟಿವಿ ದೃಶ್ಯ ಅತಿ ಹೆಚ್ಚು ಷೇರ್ ಆಗುತ್ತಿದೆ. ಅದರಲ್ಲಿ ಇರುವ ಸಮಯಕ್ಕೂ, ನಿಗೂಢ ಶಬ್ದ ಮತ್ತು ಭೂಕಂಪನದ ಅನುಭವದ ಸಮಯಕ್ಕೂ ಸಂಬಂಧವಿಲ್ಲ.
ರಸ್ತೆಗಳು ಬಿರುಕು ಗೊಂಡಿರುವ ಫೋಟೊ ಕೂಡ ಷೇರ್ ಆಗುತ್ತಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ವರದಿಯಾಗಿಲ್ಲ. ಹಾಗಿದ್ದಾಗ ಭೂಮಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಳ್ಳುವುದು ಹೇಗೆ?
ಇದನ್ನೂ ಓದಿ | BREAKING NEWS | ಭಾರಿ ಶಬ್ದದ ಜೊತೆಗೆ ಬೆಳಕು ಕಾಣಿಸಿಕೊಂಡಿದೆ
ಭೀತಿ ಹೆಚ್ಚಿಸಿದ ಸುಳ್ ಸುದ್ದಿ
ಸಾಮಾಜಿಕ ಜಾಲತಾಣದಲ್ಲಿನ ಸುಳ್ಳು ಸುದ್ದಿಯಿಂದಾಗಿ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಳವಾಗಿದೆ. ಗೊಂದಲದಲ್ಲಿರುವ ಜನರಿಗೆ ಸತ್ಯಾಸತ್ಯೆತೆ ತಿಳಿಯದೆ ಆತಂದ ದುಪ್ಪಟ್ಟಾಗಿದೆ.
ಇದನ್ನೂ ಓದಿ | BREAKING NEWS | ಶಿವಮೊಗ್ಗದ ಕ್ವಾರಿಯಲ್ಲಿ ಭಾರೀ ಸ್ಫೋಟ, ಕಾರ್ಮಿಕರ ದೇಹ ಛಿದ್ರ ಛಿದ್ರ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200