ವೈನ್‌ ಶಾಪ್‌ಗೆ ತನಿಖಾಧಿಕಾರಿಯಂತೆ ನುಗ್ಗಿದರು, ಎಣ್ಣೆ ಕೊಟ್ಟರೆ ಸುಮ್ಮನೆ ಬಿಡುವುದಾಗಿ ಎಚ್ಚರಿಸಿದರು, ಮುಂದೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 FEBRUARY 2024

SHIMOGA : ಸಕೆಂಡ್ಸ್‌ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಅದರ ತನಿಖೆಗೆ ಬಂದಿದ್ದೇವೆ ಎಂದು ಮದ್ಯದ ಅಂಗಡಿಯೊಂದರಲ್ಲಿ ಮಾಲೀಕನ ಜೊತೆಗೆ ಜಗಳವಾಡಿದ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ.

ಅಣ್ಣಾನಗರದ ವೈನ್‌ ಶಾಪ್‌ ಒಂದರಲ್ಲಿ ಘಟನೆ ಸಂಭವಿಸಿದೆ. ಅಂಗಡಿಗೆ ಆಗಮಿಸಿದ ಇಬ್ಬರು ಯುವಕರು, ಸಕೆಂಡ್ಸ್‌ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಮಾಲೀಕನಿಗೆ ತಿಳಿಸಿದ್ದಾರೆ. ಒಂದು ವೇಳೆ ಉಚಿತವಾಗಿ ಮದ್ಯ ಕೊಟ್ಟರೆ ಸುಮ್ಮನೆ ಬಿಡುವುದಾಗಿ ಹೇಳಿದ್ದಾರೆ. ಮಾಲೀಕ ಒಪ್ಪದಿದ್ದಾಗ ಮದ್ಯದ ಬಾಟಲಿಗೆ ಕೈ ಹಾಕಿದ್ದರು. ಇದನ್ನು ತಡೆಯಲು ಮುಂದಾದಾಗ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌, ಕಂಡಕ್ಟರ್‌ ಮೇಲೆ ದಾಳಿ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment