ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ 35 ಸಾವಿರ ರೈತರನ್ನು (Farmers) ಒಕ್ಕಲೆಬ್ಬಿಸಲು ನೊಟೀಸ್ ನೀಡಲಾಗುತ್ತಿದೆ. ಆದರೆ ಸಂಸದರು, ಶಾಸಕರು ಮೌನ ವಹಿಸಿದ್ದಾರೆ. ಸದನದಲ್ಲಿ ಚರ್ಚೆ ನಡೆಸಿ ರೈತರಿಗೆ ನ್ಯಾಯ ಒದಗಿಸದೆ ಇದ್ದರೆ ಹೋರಾಟ ನಡೆಸಲಾಗುತ್ತದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ಎಚ್ಚರಿಸಿದರು.
ಇದನ್ನೂ ಓದಿ » ಗಾಳಿ, ಮಳೆಗೆ ಹಲವೆಡೆ ಹಾನಿ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ನ್ಯೂಸ್
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್, ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ ಭಾಗದ ಸಾವಿರಾರು ರೈತರಿಗೆ ನೊಟೀಸ್ ನೀಡಲಾಗಿದೆ. ಉಳಿದ ಭಾಗದ ರೈತರಿಗೆ ನೊಟೀಸ್ ನೀಡಲು ಸಿದ್ಧತೆಯಾಗುತ್ತಿದೆ ಎಂದರು

ಬಗರ್‌ಹುಕುಂ ಸಾಗುವಳಿದಾರರು, ಭೂ ಹಕ್ಕಿಗಾಗಿ ಸೈಕಲ್ ಏರಿ ಯಡಿಯೂರಪ್ಪ ಹೋರಾಟ ಮಾಡಿದ್ದರು. ಆದರೆ ಅವರ ಮಕ್ಕಳು ರೈತ ಪರ ಹೋರಾಟ ಮಾಡುತ್ತಿಲ್ಲ. ಬಂಗಾರಪ್ಪ ಅವರು ಭೂ ಹಕ್ಕಿಗಾಗಿ ರಾಜ್ಯದಲ್ಲಿ ಧ್ವನಿ ಎತ್ತಿದ್ದರು. ಆದರೆ ಅವರದ್ದೇ ಮನೆ ಸಮೀಪದ ರೈತರಿಗೆ ನೊಟೀಸ್ ನೀಡಿದ್ದರು ಉಸ್ತುವಾರಿ ಸಚಿವರು ಉತ್ತರ ನೀಡುತ್ತಿಲ್ಲ ಎಂದು ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಶಿಕಾರಿಪುರ ತಾಲೂಕು ಅಂಜನಾಪುರ ಹೋಬಳಿಯ ಕಲ್ಮನೆಯ 63ಕ್ಕೂ ಹೆಚ್ಚು ರೈತರನ್ನು ಒಕ್ಕಲೆಬ್ಬಿಸಲು ನೊಟೀಸ್ ನೀಡಲಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಆದೇಶಿಸಿವೆ ಎಂದು ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ರೈತರ ಹಿತ ಕಾಯುವಂತೆಯು ಕೋರ್ಟುಗಳು ಹೇಳಿವೆ. ಆದರೆ ಸರ್ಕಾರಗಳು ಅದನ್ನು ಎಂದೂ ಜಾರಿಗೊಳಿಸಿಲ್ಲ. ಕೋರ್ಟುಗಳೆ ರಾಜ್ಯವನ್ನು ಆಳುವುದಾದರೆ ಸರ್ಕಾರ ಏಕೆ ಬೇಕು ಎಂದು ತೀ.ನಾ.ಶ್ರೀನಿವಾಸ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿಕಾರಿಪುರದ ಕಲ್ಮನೆಯ ಕೊಟ್ರೇಶ್, ಈರಪ್ಪ, ಶಿವಮಾದಯ್ಯ, ಮಂಜುನಾಥ್, ಶ್ರೀನಿವಾಸ ಸೇರಿ ಹಲವರು ಇದ್ದರು.
Thi.Na.Srinivas angry against notices being served to farmers
LATEST NEWS
- ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

- ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

- ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

- ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

- ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು















