ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಆಂಬುಲೆನ್ಸ್ (Ambulance) ತಡೆದು ತಪಾಸಣೆ ಮಾಡಿದಾಗ ಚಾಲಕ ಮದ್ಯ ಸೇವಿಸಿರುವುದು ಮತ್ತು ವಾಹನಕ್ಕೆ ಇನ್ಸುರೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಆಂಬುಲೆನ್ಸ್ ಚಾಲಕನಿಗೆ ₹13,000 ದಂಡ ವಿಧಿಸಲಾಗಿದೆ.
ಶಿವಮೊಗ್ಗ ನಗರದ ಐಬಿ ಸರ್ಕಲ್ ಬಳಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ವೇಳೆ ಆಂಬುಲೆನ್ಸ್ ಪರಿಶೀಲಿಸಿದ್ದರು. ಈ ವೇಳೆ ಆಂಬುಲೆನ್ಸ್ ಚಾಲಕ ಮದ್ಯ ಸೇವಿಸಿರುವುದು ಗೊತ್ತಾಗಿತ್ತು. ಅಲ್ಲದೆ ವಾಹನಕ್ಕೆ ಇನ್ಸುರೆನ್ಸ್ ಕೂಡ ಇರಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಆಂಬುಲೆನ್ಸ್ ಚಾಲಕನಿಗೆ ದಂಡ ವಿಧಿಸಿದೆ. ಪಿಎಸ್ಐ ತಿರುಮಲೇಶ್, ಸಿಬ್ಬಂದಿ ಮಂಜುನಾಥ್, ಪ್ರವೀಣ್ ಪಾಟೀಲ್, ಪ್ರಶಾಂತ್, ದಿನೇಶ್ ಮತ್ತು ಹರೀಶ್ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ಕಟ್ಟಿಕನಾರು ಬಳಿ ಕಾಡು ಹಂದಿಗಳ ಹಾವಳಿ, ಅಡಿಕೆ ಸಸಿಗಳು ನಾಶ
LATEST NEWS
- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು















